ADVERTISEMENT

ಆಲ್‌ಕಾರ್ಗೊ: ಎಜಿಎಲ್‌ ನಿರ್ದೇಶಕರ ಮಂಡಳಿಗೆ ವೈಷ್ಣವ್

ಪಿಟಿಐ
Published 22 ಜನವರಿ 2026, 16:40 IST
Last Updated 22 ಜನವರಿ 2026, 16:40 IST
ವೈಷ್ಣವ್ ಶೆಟ್ಟಿ
ವೈಷ್ಣವ್ ಶೆಟ್ಟಿ   

ಮುಂಬೈ: ಆಲ್‌ಕಾರ್ಗೊ ಗ್ಲೋಬಲ್‌ ಲಿಮಿಟೆಡ್‌ (ಎಜಿಎಲ್‌) ಕಂಪನಿಯ ಉತ್ತರ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವೈಷ್ಣವ್ ಶೆಟ್ಟಿ ಅವರಿಗೆ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಲಾಗಿದೆ. ಅಲ್ಲದೆ, ಅವರನ್ನು ಆಲ್‌ಕಾರ್ಗೊ ಗ್ಲೋಬಲ್‌ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಗೆ ಸೇರ್ಪಡೆ ಮಾಡಲಾಗಿದೆ.

ವೈಷ್ಣವ್ ಅವರು ಎಜಿಎಲ್‌ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಅವರ ಮಗ. ವೈಷ್ಣವ್ ಅವರು ಇನ್ನು ಮುಂದೆ ಎಜಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆದರ್ಶ್ ಹೆಗ್ಡೆ ಅವರ ಜೊತೆ ನಿಕಟವಾಗಿ ಕೆಲಸ ಮಾಡಲಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ನೇಮಕಕ್ಕೆ ಕಂಪನಿಯ ನಿರ್ದೇಶಕರ ಮಂಡಳಿಗೆ ಒಪ್ಪಿಗೆ ನೀಡಿದೆ. ಎಜಿಎಲ್‌ ಕಂಪನಿಯು ಇಡೀ ಸಮೂಹದ ವರಮಾನದಲ್ಲಿ ಶೇ 80ರಷ್ಟು ಪಾಲು ಹೊಂದಿದೆ.

ADVERTISEMENT

‘ವೈಷ್ಣವ್ ಅವರ ನೇಮಕವು ಸುಸ್ಥಿರವಾದ ಬೆಳವಣಿಗೆಯನ್ನು ಸಾಧಿಸಬಲ್ಲ ಬಲಿಷ್ಠ ನಾಯಕತ್ವವನ್ನು ಕಟ್ಟುವ ನಮ್ಮ ಬದ್ಧತೆಯನ್ನು ಹೇಳುತ್ತಿದೆ’ ಎಂದು ಶಶಿ ಕಿರಣ್ ಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.