ADVERTISEMENT

ಎಂಎಸ್‌ಎಂಇ ಕಡೆ ಅಮೆಜಾನ್‌ ನೋಟ

ಪಿಟಿಐ
Published 31 ಜುಲೈ 2020, 11:37 IST
Last Updated 31 ಜುಲೈ 2020, 11:37 IST
   

ನವದೆಹಲಿ: ಭಾರತದಲ್ಲಿನ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ವಾಣಿಜ್ಯೋದ್ಯಮಗಳನ್ನು ಡಿಜಿಟಲ್‌ ವೇದಿಕೆಗೆ ತರುವ ಕೆಲಸಕ್ಕೆ ಅಮೆಜಾನ್‌ ಆದ್ಯತೆ ನೀಡಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗಾರರನ್ನು ಅಮೆಜಾನ್‌ ವೇದಿಕೆಗೆ ಕರೆತರುವ ಕೆಲಸವೂ ನಡೆದಿದೆ ಎಂದು ಅವರು ತಿಳಿಸಿದರು.

‘ಡಿಜಿಟಲೀಕರಣ ಪ್ರಕ್ರಿಯೆಗೆ ಬೆಂಬಲವಾಗಿ ನಿಲ್ಲುವ ಹೊಸ ಕ್ರಮಗಳನ್ನು ನಾವು ಆರಂಭಿಸಿದ್ದೇವೆ’ ಎಂದು ಅಮೆಜಾನ್‌ನ ಹೂಡಿಕೆದಾರರ ಸಂಬಂಧಗಳ ವಿಭಾಗದ ನಿರ್ದೇಶಕ ಡೇವಿಡ್ ಫೀಲ್ಡ್ಸ್‌ ಅವರು ಹೂಡಿಕೆದಾರರ ಜೊತೆಗಿನ ಮಾತುಕತೆಯಲ್ಲಿ ಹೇಳಿದರು.

ವಾಲ್‌ಮಾರ್ಟ್‌ ಮಾಲೀಕತ್ವದ ಫ್ಲಿಪ್‌ಕಾರ್ಟ್‌ಗೆ ಎದುರಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಲು ಅಮೆಜಾನ್‌ ಪೈಪೋಟಿ ನಡೆಸುತ್ತಿರುವ ಹೊತ್ತಿನಲ್ಲಿ ಈ ಹೇಳಿಕೆ ಬಂದಿದೆ. ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ ಮಾರ್ಟ್‌, ಇ–ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿರಿಸಲಿದ್ದು, ಸ್ಪರ್ಧೆ ಇನ್ನಷ್ಟು ಬಿರುಸಾಗುವ ಸಾಧ್ಯತೆ ಇದೆ. ತಮ್ಮಲ್ಲಿನ ಮೂಲಸೌಕರ್ಯವನ್ನು ಹೆಚ್ಚಿಸಲು ಅಮೆಜಾನ್‌ ಮತ್ತು ಇತರ ಇ–ಕಾಮರ್ಸ್‌ ಕಂಪನಿಗಳು ಹೆಚ್ಚಿನ ಹಣ ಹೂಡಿಕೆ ಮಾಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.