ADVERTISEMENT

ರಾಜ್ಯದ ‘ಎಸ್‌ಎಂಬಿ’ಗಳಿಗೆ ಅಮೆಜಾನ್‌ ವೇದಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:18 IST
Last Updated 15 ಅಕ್ಟೋಬರ್ 2020, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ 35 ಸಾವಿರಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಸ್‌ಎಂಬಿ) ಹಬ್ಬದ ಸಂದರ್ಭದಲ್ಲಿ ಅಮೆಜಾನ್‌ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿವೆ.

ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಎಸ್‌ಎಂಬಿಗಳು ತಮ್ಮ ವಹಿವಾಟು ಕೈತಪ್ಪದಂತೆ ನೋಡಿಕೊಳ್ಳಲು ಡಿಜಿಟಲೀಕರಣದತ್ತ ಹೊರಳುತ್ತಿವೆ. ಇ–ಕಾಮರ್ಸ್‌ ವೇದಿಕೆಯ ಮೂಲಕ ವಹಿವಾಟು ನಡೆಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ಹಬ್ಬದ ಋತು ಸಮೀಪಿಸುತ್ತಿರುವುದರಿಂದ ದೇಶದಾದ್ಯಂತ ಇರುವ ಗ್ರಾಹಕರನ್ನು ತಲುಪಲು ‘ಲೋಕ್‌ ಶಾಪ್‌ ಆನ್‌ ಅಮೆಜಾನ್‌’ ನೆರವಾಗುತ್ತಿದೆ ಎಂದು ಅಮೆಜಾನ್‌ ಪ್ರಕಟಣೆಯಲ್ಲಿ ಹೇಳಿದೆ.

ಶನಿವಾರದಿಂದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಆರಂಭವಾಗಲಿದ್ದು, ಲಕ್ಷಕ್ಕೂ ಅಧಿಕ ಎಸ್‌ಎಂಬಿಗಳು ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರಾಟ ಮಾಡಲಿವೆ ಎಂದು ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.