ನವದೆಹಲಿ: ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು, ಗ್ರಾಹಕರಿಗೆ ತ್ವರಿತ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸಲು ಪ್ರಸಕ್ತ ವರ್ಷದಲ್ಲಿ ₹2 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಇ–ಕಾಮರ್ಸ್ ಕಂಪನಿ ಅಮೆಜಾನ್ ಗುರುವಾರ ತಿಳಿಸಿದೆ.
ಈ ಹೂಡಿಕೆಯು ಕಂಪನಿಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಕಂಪನಿಯ ಸೇವೆಗಳನ್ನು ದೇಶದ ಹೆಚ್ಚಿನ ಸ್ಥಳಗಳಿಗೆ ತಲುಪಿಸಲು ಅನುವು ಮಾಡಿಕೊಡಲಿದೆ. ಜೊತೆಗೆ ಈ ಹೂಡಿಕೆಯಿಂದಾಗಿ ಹೊಸ ಪ್ರದೇಶಗಳಿಗೆ ಸೇವೆಗಳನ್ನು ತಲುಪಿಸಲು ಸಾಧ್ಯವಾಗುವ ನಿರೀಕ್ಷೆ ಇದೆ. ಕಂಪನಿಯ ಉದ್ಯೋಗಿಗಳ ಆರೋಗ್ಯ ಮತ್ತು ಆರ್ಥಿಕ ಸುಧಾರಣೆ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ.
ಸರಕುಗಳನ್ನು ಮನೆಗೆ ತಲುಪಿಸುವವರ ಸುರಕ್ಷತೆಗೆ ತಂತ್ರಜ್ಞಾನವನ್ನು ಬಳಸಿಕೊಂಡು ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.
ಭಾರತ ಇ–ವಾಣಿಜ್ಯ ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿ ಅಮೆಜಾನ್ ಕಂಪನಿಯು ಈ ಹೂಡಿಕೆಯ ಬಗ್ಗೆ ಘೋಷಣೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.