ADVERTISEMENT

Amul Price Cut: ಅಮೂಲ್‌ನ 700 ಉತ್ಪನ್ನಗಳ ಬೆಲೆ ಇಳಿಕೆ

ಪಿಟಿಐ
Published 20 ಸೆಪ್ಟೆಂಬರ್ 2025, 16:10 IST
Last Updated 20 ಸೆಪ್ಟೆಂಬರ್ 2025, 16:10 IST
ಅಮೂಲ್‌
ಅಮೂಲ್‌   

ನವದೆಹಲಿ: ಅಮೂಲ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟವಾಗುವ ತನ್ನ 700ಕ್ಕೂ ಹೆಚ್ಚು ಉತ್ಪನ್ನಗಳ ರಿಟೇಲ್ ಬೆಲೆಯನ್ನು ಕಡಿತ ಮಾಡಿರುವುದಾಗಿ ಗುಜರಾತ್‌ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು (ಜಿಸಿಎಂಎಂಎಫ್‌) ಶನಿವಾರ ತಿಳಿಸಿದೆ.

ಹೊಸ ದರವು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದೆ. ಜಿಎಸ್‌ಟಿ ಪರಿಷ್ಕರಣೆಯ ಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿರುವುದಾಗಿ ಒಕ್ಕೂಟ ತಿಳಿಸಿದೆ.

ಬೆಣ್ಣೆ, ತುಪ್ಪ, ಯುಎಚ್‌ಟಿ ಹಾಲು, ಐಸ್‌ಕ್ರೀಮ್, ಪನೀರ್, ಚಾಕೋಲೇಟ್‌ಗಳು ಸೇರಿದಂತೆ ಹಲವಾರು ಉತ್ಪನ್ನಗಳ ಬೆಲೆಯನ್ನು ‍ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ. 

ADVERTISEMENT

100 ಗ್ರಾಂ ಬೆಣ್ಣೆಯ ಎಂಆರ್‌ಪಿ ದರ ₹62ರಿಂದ ₹58ಕ್ಕೆ ಇಳಿಯಲಿದೆ. ಒಂದು ಲೀಟರ್ ತುಪ್ಪದ ಬೆಲೆ ₹40ನಷ್ಟು ಕಡಿಮೆ ಆಗಿ ₹610 ಆಗಲಿದೆ. ಸಂಸ್ಕರಿಸಿದ 1 ಕೆ.ಜಿ ಗಿಣ್ಣು ₹30 ಕಡಿಮೆಯಾಗಿ, ₹545 ಆಗಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.