ADVERTISEMENT

ಆ್ಯಪಲ್‌ಗೆ ₹9 ಲಕ್ಷ ಕೋಟಿ ವರಮಾನ

ಪಿಟಿಐ
Published 31 ಅಕ್ಟೋಬರ್ 2025, 15:48 IST
Last Updated 31 ಅಕ್ಟೋಬರ್ 2025, 15:48 IST
ಆ್ಯಪಲ್‌
ಆ್ಯಪಲ್‌   

ನವದೆಹಲಿ: ಐಫೋನ್‌ ತಯಾರಕ ಕಂಪನಿ ಆ್ಯಪಲ್‌, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹9 ಲಕ್ಷ ಕೋಟಿ ವರಮಾನ ಗಳಿಸಿದೆ. ಇದು ಕಂಪನಿಯು ಭಾರತದಲ್ಲಿ ಗಳಿಸಿದ ಸಾರ್ವಕಾಲಿಕ ದಾಖಲೆಯ ವರಮಾನವಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವರಮಾನದಲ್ಲಿ ಶೇ 8ರಷ್ಟು ಹೆಚ್ಚಳವಾಗಿದೆ. ಐಫೋನ್‌ಗಳ ಮಾರಾಟದಲ್ಲಿನ ಹೆಚ್ಚಳದಿಂದ ವರಮಾನ ಏರಿಕೆಯಾಗಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲೂ ವರಮಾನವು ಹೆಚ್ಚಳವಾಗಲಿದೆ ಎಂದು ಅಂದಾಜಿಸಿದೆ.

ಅಮೆರಿಕ, ಕೆನಡಾ, ಲ್ಯಾಟಿನ್ ಅಮೆರಿಕ, ಪಶ್ಚಿಮ ಯುರೋಪ್, ಪಶ್ಚಿಮ ಏಷ್ಯಾ, ಜಪಾನ್, ಕೊರಿಯಾ ಮತ್ತು ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ಮಾರುಕಟ್ಟೆಗಳಲ್ಲಿ ಸೆಪ್ಟೆಂಬರ್ ತ್ರೈಮಾಸಿಕದ ಆದಾಯವು ದಾಖಲೆ ಹೊಂದಿದೆ ಎಂದು ತಿಳಿಸಿದೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಕಂಪನಿಯು ಐಫೋನ್‌ 17 ಸೀರೀಸ್‌ ಬಿಡುಗಡೆ ಮಾಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.