ADVERTISEMENT

ಇನ್ನೊಮ್ಮೆ ಅರ್ಜಿ ಸಲ್ಲಿಸಿ: ಪೇಟಿಎಂಗೆ ಆರ್‌ಬಿಐ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 17:08 IST
Last Updated 26 ನವೆಂಬರ್ 2022, 17:08 IST

ಮುಂಬೈ (ರಾಯಿಟರ್ಸ್‌): ಪೇಟಿಎಂ ಪೇಮೆಂಟ್ಸ್‌ ಸರ್ವೀಸಸ್‌ ಲಿಮಿಟೆಡ್‌ಗೆ ಪೇಮೆಂಟ್‌ ಅಗ್ರಿಗೇಟರ್‌ ಪರವಾನಗಿ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರಾಕರಿಸಿದೆ. ಕೆಲವು ಷರತ್ತುಗಳೊಂದಿಗೆ 120 ದಿನಗಳ ಒಳಗಾಗಿ ಮತ್ತೆ ಅರ್ಜಿ ಸಲ್ಲಿಸುವಂತೆ ಮಾತೃಸಂಸ್ಥೆ ಒನ್‌ 97 ಕಮ್ಯುನಿಕೇಷನ್ಸ್‌ಗೆ ಸೂಚನೆ ನೀಡಿದೆ.

ಒನ್‌ 97 ಕಮ್ಯುನಿಕೇಷನ್ಸ್‌ನ ಅಂಗಸಂಸ್ಥೆ ಇದಾಗಿದ್ದು, ಕಂಪನಿಯಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಅಗತ್ಯವಾದ ಅನುಮತಿಗಳನ್ನು ಪಡೆದುಕೊಂಡ ಬಳಿಕ ಅರ್ಜಿ ಸಲ್ಲಿಸುವಂತೆ ಆರ್‌ಬಿಐ ಸೂಚನೆ ನೀಡಿರುವುದಾಗಿ ಕಂಪನಿಯು ಷೇರುಪೇಟೆಗೆ ಶನಿವಾರ ಮಾಹಿತಿ ನೀಡಿದೆ.

ಆನ್‌ಲೈನ್ ವ್ಯಾಪಾರಿಗಳಿಗೆ ಎಲ್ಲಾ ವಿಧದ ಪಾವತಿ ಸೌಲಭ್ಯಗಳನ್ನು ಒಂದೇ ಕಡೆ ಸಿಗುವ ವೇದಿಕೆಯೇ ಪೇಮೆಂಟ್‌ ಅಗ್ರಿಗೇಟರ್‌. ಈ ವ್ಯವಸ್ಥೆ ಜಾರಿಗೊಳಿಸಲು ಆರ್‌ಬಿಐನ ಅನುಮತಿ ಪಡೆಯುವುದು ಕಡ್ಡಾಯ.

ADVERTISEMENT

ಪರವಾನಗಿ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸುವವರೆಗೂ ಯಾವುದೇ ಹೊಸ ಆನ್‌ಲೈನ್‌ ವ್ಯಾಪಾರಿಗಳನ್ನು ಸೇರಿಸಿಕೊಳ್ಳದಂತೆ ಪೇಟಿಎಂ ಪೇಮೆಂಟ್ಸ್‌ ಸರ್ವೀಸಸ್‌ಗೆ ಆರ್‌ಬಿಐ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.