ADVERTISEMENT

ವಿಮಾನ ಇಂಧನ, ಪೆಟ್ರೋಲ್‌ ಡೀಸೆಲ್ ‌ಬೆಲೆ ಮತ್ತೆ ಏರಿಕೆ

ಪಿಟಿಐ
Published 16 ಜೂನ್ 2020, 13:58 IST
Last Updated 16 ಜೂನ್ 2020, 13:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಂಗಳವಾರ ವಿಮಾನ ಇಂಧನ (ಎಟಿಎಫ್) ಶೇ 16.3, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 47 ಪೈಸೆ ಮತ್ತು 93 ಪೈಸೆಗಳಂತೆ ಹೆಚ್ಚಿಸಿವೆ.

ಇಂಧನಗಳ ಬೆಲೆ ಏರಿಕೆಯು ಸತತ 10ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಪೆಟ್ರೋಲ್‌ ಬೆಲೆ ₹ 5.47 ಮತ್ತು ಡೀಸೆಲ್‌ ಬೆಲೆ ₹ 5.80ರಷ್ಟು ತುಟ್ಟಿಯಾಗಿದೆ. ಬೆಂಗಳೂರಿಲ್ಲಿ ಪೆಟ್ರೋಲ್‌ ಬೆಲೆ ಈಗ ₹ 79.16 ಮತ್ತು ಡೀಸೆಲ್‌ ಬೆಲೆ ₹ 71.58ಕ್ಕೆ ತಲುಪಿದೆ.

ವಿಮಾನ ಇಂಧನವನ್ನು ಪ್ರತಿ ಕಿಲೊ ಲೀಟರ್‌ಗೆ ₹ 5,494.5ರಂತೆ (₹ 39,069.87ಕ್ಕೆ) ಹೆಚ್ಚಿಸಲಾಗಿದೆ. ಇದು ಈ ತಿಂಗಳಲ್ಲಿನ ಎರಡನೆ ಬೆಲೆ ಏರಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.