ADVERTISEMENT

ವಿಮಾನ ಇಂಧನ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 16:49 IST
Last Updated 16 ಜನವರಿ 2022, 16:49 IST

ನವದೆಹಲಿ:ವಿಮಾನ ಇಂಧನ ದರವನ್ನು ಭಾನುವಾರ ಶೇಕಡ 4.2ರಷ್ಟು ಹೆಚ್ಚಿಸಲಾಗಿದೆ. ಇದು ಈ ತಿಂಗಳಲ್ಲಿ ಮಾಡಿರುವ ಎರಡನೆಯ ಬೆಲೆ ಹೆಚ್ಚಳ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ವಿಮಾನ ಇಂಧನ ದರವನ್ನು ಕಿಲೋ ಲೀಟರ್‌ಗೆ ₹ 3,232ರಷ್ಟು ಹೆಚ್ಚಿಸಲಾಗಿದೆ. ರಾಜಧಾನಿ ದೆಹಲಿಯಲ್ಲಿ ವಿಮಾನ ಇಂಧನ ಬೆಲೆಯು ಕಿಲೋ ಲೀಟರ್‌ಗೆ ₹ 79,294ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT