ADVERTISEMENT

ಔಡಿ ಕ್ಯು8 ಬಿಡುಗಡೆ

ಅತ್ಯಾಧುನಿಕ ತಂತ್ರಜ್ಞಾನದ, ದುಬಾರಿ ಬೆಲೆಯ ಎಸ್‌ಯುವಿ

ಜಯಸಿಂಹ ಆರ್.
Published 16 ಜನವರಿ 2020, 20:04 IST
Last Updated 16 ಜನವರಿ 2020, 20:04 IST
ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೊನ್‌ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಔಡಿ ಕ್ಯು8 ಅನಾವರಣಗೊಳಿಸಿದರು – ಪಿಟಿಐ ಚಿತ್ರ
ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೊನ್‌ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಔಡಿ ಕ್ಯು8 ಅನಾವರಣಗೊಳಿಸಿದರು – ಪಿಟಿಐ ಚಿತ್ರ   

ಮುಂಬೈ: ಔಡಿ ಇಂಡಿಯಾ ಕಂಪನಿಯು ತನ್ನ ಬಹು ನಿರೀಕ್ಷಿತ ಐಷಾರಾಮಿ ಎಸ್‌ಯುವಿ ಕ್ಯು8 ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕ್ರಿಕೆಟ್ ತಂಡದ ನಾಯಕ ಮತ್ತು ಔಡಿ ಇಂಡಿಯಾ ಕಂಪನಿಯ ಪ್ರಚಾರ ರಾಯಭಾರಿ ವಿರಾಟ್ ಕೊಹ್ಲಿ ಅವರು ಕ್ಯು8 ಬಿಡುಗಡೆ ಮಾಡಿದರು. ಔಡಿ ಇಂಡಿಯಾದ ಅತ್ಯಾಧುನಿಕ ತಂತ್ರಜ್ಞಾನದ ದುಬಾರಿ ಬೆಲೆಯ ವಾಹನ ಇದಾಗಿದೆ. ಕಂಪನಿಯ ಅತ್ಯಂತ ವೇಗದ ಎಸ್‌ಯುವಿ ಎನಿಸಿದೆ.

ಜರ್ಮನಿಯಲ್ಲಿ ತಯಾರಾಗುವ ಕ್ಯು8 ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ADVERTISEMENT

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಮುಂಬೈಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.