ADVERTISEMENT

ಜಿಎಸ್‌ಟಿ ತಗ್ಗಿಸಿ: ಎಸಿಎಂಎ ಒತ್ತಾಯ

ಪಿಟಿಐ
Published 19 ಆಗಸ್ಟ್ 2020, 14:44 IST
Last Updated 19 ಆಗಸ್ಟ್ 2020, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಹನ ಉದ್ಯಮದ ಚೇತರಿಕೆಗೆ ಅನುಕೂಲ ಆಗುವಂತೆ ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡಬೇಕು ಎಂದು ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟವು (ಎಸಿಎಂಎ) ಸರ್ಕಾರವನ್ನು ಒತ್ತಾಯಿಸಿದೆ.

ವಾಹನ ಬಿಡಿಭಾಗಗಳ ಉದ್ದಿಮೆಯು ದೇಶದ ಜಿಡಿಪಿಗೆ ಶೇಕಡ 2.3ರಷ್ಟು ಕೊಡುಗೆ ನೀಡುತ್ತಿದೆ. 50 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದೆ. ಸದ್ಯದ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುವಂತೆ ಅದು ಸರ್ಕಾರವನ್ನು ಕೇಳಿದೆ.

‘ಬೇಡಿಕೆ ಹೆಚ್ಚಿಸಲು ಎಲ್ಲಾ ಮಾದರಿಯ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 18ಕ್ಕೆ ತಗ್ಗಿಸುವಂತೆ ಹಾಗೂ ಉತ್ತೇಜನ ಆಧಾರಿತ ಗುಜರಿ ನೀತಿ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ದೀಪಕ್‌ ಜೈನ್‌ ಹೇಳಿದ್ದಾರೆ.

ADVERTISEMENT

‘ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಏಕರೂಪದ ಶೇ 18ರಷ್ಟು ಜಿಎಸ್‌ಟಿ ನಿಗದಿಪಡಿಸಲು ಕೇಳಲಾಗಿದೆ. ಸದ್ಯ ಶೇ 60ರಷ್ಟು ಬಿಡಿಭಾಗಗಳಿಗೆ ಶೇ 18ರಷ್ಟು ತೆರಿಗೆ, ಇನ್ನುಳಿದ ಶೇ 40ರಷ್ಟಕ್ಕೆ ಶೇ 28ರಷ್ಟು ತೆರಿಗೆ ಇದೆ’ ಎಂದು ಅವರು ವಿವರಿಸಿದ್ದಾರೆ.

ಹಬ್ಬದ ಅವಧಿಯ ವೇಳೆಗೆ ಬಿಡಿಭಾಗ ಉದ್ದಿಮೆಯು ಕೋವಿಡ್‌–19ಗೂ ಮೊದಲು ಇದ್ದ ಸ್ಥಿತಿಗೆ ಮರಳುವ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.