ADVERTISEMENT

ಟ್ರಂಪ್‌ ಸುಂಕ ನೀತಿ: ಆಟೊ ಷೇರಿನ ಮೌಲ್ಯ ಇಳಿಕೆ

ಪಿಟಿಐ
Published 27 ಮಾರ್ಚ್ 2025, 13:50 IST
Last Updated 27 ಮಾರ್ಚ್ 2025, 13:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಟ್ರಂಪ್‌ ಸುಂಕ ನೀತಿಯಿಂದಾಗಿ ದೇಶದ ಷೇರುಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ವಾಹನ ಮತ್ತು ಅವುಗಳ ಬಿಡಿಭಾಗ ತಯಾರಿಸುವ ಕಂಪನಿಗಳ ಷೇರಿನ ಮೌಲ್ಯ ಇಳಿಕೆ ಕಂಡಿದೆ.

ಟಾಟಾ ಮೋಟರ್ಸ್‌ ಶೇ 5.50, ಅಶೋಕ್‌ ಲೇಲ್ಯಾಂಡ್‌ ಶೇ 2.77, ಐಷರ್‌ ಮೋಟರ್ಸ್‌ ಶೇ 0.97, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 0.35 ಹಾಗೂ ಅಪೋಲೊ ಟೈರ್ಸ್‌ ಷೇರಿನ ಮೌಲ್ಯವು ಶೇ 0.24ರಷ್ಟು ಕುಸಿದಿದೆ. 

ವಾಹನಗಳ ಬಿಡಿಭಾಗ ತಯಾರಿಸುವ ಕಂಪನಿಗಳಾದ ಸೋನಾ ಬಿಎಲ್‌ಡಬ್ಲ್ಯು ಪ್ರಿಷಿಸನ್‌ ಫೋರ್ಜಿಂಗ್ಸ್ ಶೇ 5.89, ಸಂವರ್ಧನಾ ಮದರ್‌ಸನ್ ಇಂಟರ್‌ನ್ಯಾಷನಲ್ ಶೇ 2.22, ಭಾರತ್ ಫೋರ್ಜ್ ಶೇ 2.30, ಎಎಸ್‌ಕೆ ಆಟೊಮೋಟಿವ್‌ ಶೇ 1.83, ಕ್ರಾಫ್ಟ್‌ಮನ್‌ ಆಟೋಮೇಷನ್‌ ಶೇ 1.54 ಹಾಗೂ ರಾಮಕೃಷ್ಣ ಫೊರ್ಜಿಂಗ್ಸ್ ಷೇರಿನ ಮೌಲ್ಯದಲ್ಲಿ ಶೇ 0.40ರಷ್ಟು ಇಳಿಕೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.