ADVERTISEMENT

ವಾಹನಗಳ ರಿಟೇಲ್‌ ಮಾರಾಟ ಚೇತರಿಕೆ

ಪಿಟಿಐ
Published 8 ಜುಲೈ 2021, 11:35 IST
Last Updated 8 ಜುಲೈ 2021, 11:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ವಾಹನಗಳ ರಿಟೇಲ್‌ ಮಾರಾಟವು ಆರೋಗ್ಯಕರ ಚೇತರಿಕೆ ಕಂಡುಕೊಂಡಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.

ಪ್ರಯಾಣಿಕ ವಾಹನ ಮಾರಾಟವು ಮೇನಲ್ಲಿ 85,733 ಇದ್ದಿದ್ದು, ಜೂನ್‌ನಲ್ಲಿ 1.84 ಲಕ್ಷಕ್ಕೆ ಏರಿಕೆ ಕಂಡಿದೆ. ವಾಣಿಜ್ಯ ವಾಹನಗಳ ಮಾರಾಟ 17,534ರಿಂದ 35,700ಕ್ಕೆ ಹೆಚ್ಚಾಗಿದೆ.

ತ್ರಿಚಕ್ರ ವಾಹನಗಳ ಮಾರಾಟ 5,215ರಿಂದ 14,732ಕ್ಕೆ ಏರಿಕೆ ಆಗಿದೆ. ಟ್ರ್ಯಾಕ್ಟರ್‌ ಮಾರಾಟವು 16,616ರಿಂದ 52,261ಕ್ಕೆ, ಎಲ್ಲ ಮಾದರಿಗಳ ವಾಹನಗಳನ್ನು ಒಳಗೊಂಡ ಒಟ್ಟಾರೆ ಮಾರಾಟವು 5.35 ಲಕ್ಷದಿಂದ 12.17 ಲಕ್ಷಕ್ಕೆ ಏರಿಕೆ ಕಂಡಿದೆ.

ADVERTISEMENT

ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಟುಂಬದ ಸುರಕ್ಷತೆಗಾಗಿ ಸ್ವಂತ ವಾಹನ ಹೊಂದಲು ಬಯಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕ ವಾಹನಗಳ ವಿಭಾಗವು ಉತ್ತಮ ಬೇಡಿಕೆ ಕಂಡುಕೊಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ತಿಳಿಸಿದ್ದಾರೆ.

2019ರ ಜೂನ್‌ ತಿಂಗಳಿನಲ್ಲಿ ಆಗಿದ್ದ ಮಾರಾಟಕ್ಕೆ ಹೋಲಿಸಿದರೆ 2021ರ ಜೂನ್‌ನಲ್ಲಿ ಮಾರಾಟವು ಶೇ (–) 28ರಷ್ಟು ಇಳಿಕೆ ಆಗಿದೆ. ತ್ರಿಚಕ್ರವಾಹನ ಮಾರಾಟ ಶೇ (–) 70 ಮತ್ತು ವಾಣಿಜ್ಯ ವಾಹನಗಳ ಮಾರಾಟ ಶೇ (–) 45ರಷ್ಟು ಇಳಿಕೆ ಕಂಡಿವೆ. ಟ್ರ್ಯಾಕ್ಟರ್‌ ಮಾರಾಟ ಮಾತ್ರ ಶೇ 27ರಷ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.