
ಪ್ರಜಾವಾಣಿ ವಾರ್ತೆಬೆಂಗಳೂರು: ಎಂಎಸ್‌ಎಂಇ ವಲಯದ ಉದ್ಯಮಗಳಿಗಾಗಿ ಎಕ್ಸಿಸ್ ಬ್ಯಾಂಕ್ ಚಿನ್ನದ ಸಾಲ ಯೋಜನೆ ಆರಂಭಿಸಿದೆ. ಸಣ್ಣ ಉದ್ದಿಮೆಗಳು ತಮ್ಮಲ್ಲಿನ ಚಿನ್ನವನ್ನು ಆಧಾರವಾಗಿ ಬಳಸಿ ಈ ಯೋಜನೆಯ ಅಡಿ ಒ.ಡಿ. ಸೌಲಭ್ಯ ಪಡೆಯಬಹುದು.
ಅತ್ಯಂತ ಕಡಿಮೆ ದಾಖಲೆಗಳನ್ನು ಪಡೆದು ಈ ಸಾಲ ನೀಡಲಾಗುತ್ತದೆ. ಅರ್ಹ ಗ್ರಾಹಕರು ಒಂದೇ ದಿನದಲ್ಲಿ ಸಾಲ ಪಡೆದುಕೊಳ್ಳಬಹುದು, ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಕನಿಷ್ಠ ₹50 ಸಾವಿರದಿಂದ ₹1 ಕೋಟಿಯವರೆಗೆ ಸಾಲ ನೀಡಲಾಗುತ್ತದೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.