ಬಜಾಜ್ ಚೇತಕ್ ಸ್ಕೂಟರ್
ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಕಂಪನಿ ಭರ್ಜರಿ ಕೊಡುಗೆ ಘೋಷಿಸಿದೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಸ್ಕೂಟರ್‌ನ ಬೆಲೆಯನ್ನು ₹1.15 ಲಕ್ಷಕ್ಕೆ ಕಂಪನಿ ನಿಗದಿಪಡಿಸಿದೆ.
ನೀರಿನಿಂದ ರಕ್ಷಿಸುವ ಐಪಿ67 ತಂತ್ರಜ್ಞಾನ, ಎಲ್ಲಾ ಋತುಮಾನಗಳಲ್ಲೂ ಸುರಕ್ಷಿತ ಚಾಲನೆ, ಉತ್ತಮ ಸರ್ವೀಸ್ ಸಂಪರ್ಕ ಜಾಲದಂತ ಸೌಲಭ್ಯಗಳನ್ನು ಗ್ರಾಹಕರಿಗೆ ಕಂಪನಿ ನೀಡುತ್ತಿದೆ.
ಚೇತಕ್ ಸ್ಕೂಟರ್ ಈಗ ಶೋರೂಂಗಳಲ್ಲಿ ಮಾತ್ರವಲ್ಲದೇ ಅಮೇಜಾನ್ ಅಂತರ್ಜಾಲ ತಾಣದಲ್ಲೂ ಲಭ್ಯ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.