ADVERTISEMENT

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ ಲಾಭ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 16:26 IST
Last Updated 29 ಜುಲೈ 2025, 16:26 IST
   

ಬೆಂಗಳೂರು: ಬ್ಯಾಂಕ್‌ ಆಫ್‌ ಬರೋಡಾ ಜೂನ್ ತ್ರೈಮಾಸಿಕದಲ್ಲಿ ₹ 4,541 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹4,458 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 1.9ರಷ್ಟು ಏರಿಕೆ ದಾಖಲಾಗಿದೆ. ನಿವ್ವಳ ಬಡ್ಡಿ ವರಮಾನವು ₹11,435 ಕೋಟಿಗೆ ತಲುಪಿದೆ.

‘ಠೇವಣಿ ಸಂಗ್ರಹವು ಶೇ 8.1ರಷ್ಟು ಏರಿಕೆಯಾಗಿ ಜೂನ್‌ 30ರ ಅಂತ್ಯಕ್ಕೆ ₹ 12,04,283 ಕೋಟಿಗೆ ತಲುಪಿದೆ’ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‌ಪಿಎ) ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ 0.60ರಷ್ಟು ಕಡಿಮೆಯಾಗಿ ಶೇಕಡ 2.28ರಷ್ಟಕ್ಕೆ ಇಳಿದಿದೆ. ಬ್ಯಾಂಕ್‌ನ ನಿವ್ವಳ ವಸೂಲಾಗದ ಸಾಲದ (ಎನ್‌ಎನ್‌ಪಿಎ) ಪ್ರಮಾಣ ಕೂಡ ಶೇ 0.09ರಷ್ಟು ಕಡಿಮೆಯಾಗಿ ಶೇ 0.60ಕ್ಕೆ ಇಳಿದಿದೆ.

ADVERTISEMENT

ಬ್ಯಾಂಕ್‌ನ ಒಟ್ಟಾರೆ ಸಾಲ ನೀಡಿಕೆ ಪ್ರಮಾಣವು ಶೇ 12.6ಕ್ಕೆ ಹೆಚ್ಚಳ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.