ADVERTISEMENT

ಗೃಹ, ಕಾರು ಸಾಲದ ಬಡ್ಡಿ ಇಳಿಕೆ ಮಾಡಿದ ಬ್ಯಾಂಕ್‌ ಆಫ್ ಮಹಾರಾಷ್ಟ್ರ

ಪಿಟಿಐ
Published 12 ಆಗಸ್ಟ್ 2023, 13:00 IST
Last Updated 12 ಆಗಸ್ಟ್ 2023, 13:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ (ಬಿಒಎಂ) ಸೋಮವಾರದಿಂದ ಜಾರಿಗೆ ಬರುವಂತೆ ಗೃಹ ಮತ್ತು ಕಾರು ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.20ರವರೆಗೆ ಇಳಿಕೆ ಮಾಡಿದೆ. ಪ್ರೊಸೆಸಿಂಗ್ ಶುಲ್ಕವನ್ನೂ ಕೈಬಿಟ್ಟಿರುವುದಾಗಿ ಅದು ತಿಳಿಸಿದೆ.

ಈ ಪರಿಷ್ಕರಣೆಯಿಂದಾಗಿ ಗೃಹ ಸಾಲದ ನೀಡಿಕೆ ದರವು ಶೇ 8.60ರಿಂದ ಶೇ 8.50ಕ್ಕೆ ಇಳಿಕೆ ಆಗಲಿದೆ. ಕಾರು ಸಾಲದ ಬಡ್ಡಿದರವು ಶೇ 0.20ರಷ್ಟು ಇಳಿಕೆ ಆಗಲಿದ್ದು, ಶೇ 8.70ಕ್ಕೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಡ್ಡಿದರ ಕಡಿತ ಮತ್ತು ಪ್ರೊಸೆಸಿಂಗ್‌ ಶುಲ್ಕ ಕೈಬಿಟ್ಟಿರುವುದರಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಒಂದಿಷ್ಟು ಕಡಿಮೆ ಆಗಲಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.