ADVERTISEMENT

ಜನವರಿ 27ಕ್ಕೆ ಬ್ಯಾಂಕ್‌ ಮುಷ್ಕರ: ಐಎನ್‌ಬಿಇಎಫ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 20:25 IST
Last Updated 5 ಜನವರಿ 2026, 20:25 IST
<div class="paragraphs"><p>ಮುಷ್ಕರ</p></div>

ಮುಷ್ಕರ

   

ಬೆಂಗಳೂರು: ಬ್ಯಾಂಕ್‌ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ನಿಗದಿ ಮಾಡಬೇಕು ಎಂಬ ಆಗ್ರಹದೊಂದಿಗೆ ಬ್ಯಾಂಕ್‌ ನೌಕರರು ಜನವರಿ 27ರಂದು ದೇಶದಾದ್ಯಂತ ಒಂದು ದಿನದ ಮುಷ್ಕರ ನಡೆಸಲಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟದ (ಐಎನ್‌ಬಿಇಎಫ್‌) ಉಪ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಈ ಮುಷ್ಕರವು ಪೂರ್ಣ ಪ್ರಮಾಣದಲ್ಲಿ ನಡೆದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಗ್ರಾಹಕರಿಗೆ ಸತತ ನಾಲ್ಕು ದಿನಗಳ ಕಾಲ (ಜನವರಿ 24ರಿಂದ 27ರವರೆಗೆ) ಶಾಖೆಯ ಮೂಲಕ ಸಿಗುವ ಸೇವೆಗಳು ಲಭ್ಯವಾಗುವುದಿಲ್ಲ.

ADVERTISEMENT

ಈಗಿನ ನಿಯಮಗಳ ಪ್ರಕಾರ ಬ್ಯಾಂಕ್ ನೌಕರರಿಗೆ ಪ್ರತಿ ತಿಂಗಳ ಎರಡನೆಯ ಮತ್ತು ನಾಲ್ಕನೆಯ ಶನಿವಾರ, ಎಲ್ಲ ಭಾನುವಾರ ರಜಾ ದಿನಗಳಾಗಿವೆ. ಆರ್‌ಬಿಐ, ಎಲ್‌ಐಸಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸದ ದಿನಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.