ADVERTISEMENT

ಬ್ಯಾಂಕಿಂಗ್‌ ವಲಯದ ಷೇರುಗಳ ಗಳಿಕೆ

ಅರ್ಥಿಕ ಚೇತರಿಕೆಗೆ ಪ್ಯಾಕೇಜ್‌ ನಿರೀಕ್ಷೆ: ಬಿಎಸ್‌ಇ 593 ಅಂಶ ಚೇತರಿಕೆ

ಪಿಟಿಐ
Published 28 ಸೆಪ್ಟೆಂಬರ್ 2020, 20:23 IST
Last Updated 28 ಸೆಪ್ಟೆಂಬರ್ 2020, 20:23 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರದಿಂದ ನೆರವು ಸಿಗುತ್ತದೆ, ಅರ್ಥ ವ್ಯವಸ್ಥೆಯ ಚೇತರಿಕೆಗೆ ಕೂಡ ಪ್ಯಾಕೇಜ್ ಘೋಷಣೆ ಆಗಲಿದೆ ಎಂಬ ಆಶಾಭಾವದ ಪರಿಣಾಮವಾಗಿ ಸೋಮವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡವು.

ಇಂಡಸ್ ಇಂಡ್ ಬ್ಯಾಂಕಿನ ಷೇರುಗಳ ಮೌಲ್ಯದಲ್ಲಿ ಶೇಕಡ 7.85ರಷ್ಟು ಹೆಚ್ಚಳ ಆಯಿತು. ಬಂಧನ್ ಬ್ಯಾಂಕ್ ಶೇ 5.83ರಷ್ಟು, ಆ್ಯಕ್ಸಿಸ್ ಬ್ಯಾಂಕ್ ಶೇ 5.83ರಷ್ಟು, ಫೆಡರಲ್ ಬ್ಯಾಂಕ್ ಶೇ 5.76ರಷ್ಟು, ಆರ್‌ಬಿಎಲ್ ಬ್ಯಾಂಕ್ ಶೇ 5.24ರಷ್ಟು ಹೆಚ್ಚಳ ಕಂಡವು. ಬಿಎಸ್‌ಇ ಬ್ಯಾಂಕಿಂಗ್ ವಲಯದ ಸೂಚ್ಯಂಕವು ಶೇ 3.38ರಷ್ಟು ಗಳಿಕೆ ಕಂಡಿತು.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಷೇರುಗಳು ಚೇತರಿಕೆ ಕಂಡವು. ಬಿಎಸ್‌ಇ ಸೆನ್ಸೆಕ್ಸ್‌ 593 ಅಂಶಗಳಷ್ಟು ಚೇತರಿಕೆ ಕಂಡಿತು.

ADVERTISEMENT

‘ಆಟೊಮೊಬೈಲ್‌, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಸರ್ಕಾರವು ಇನ್ನೊಂದು ಸುತ್ತಿನ ಆರ್ಥಿಕ ಉತ್ತೇಜನ ಕೊಡುಗೆ ಘೋಷಿಸಲಿದೆ ಎಂಬ ನಿರೀಕ್ಷೆಯು ಹೂಡಿಕೆದಾರರಲ್ಲಿ ಹೆಚ್ಚಾಗಿದೆ’ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.