ADVERTISEMENT

ಸರ್ಕಾರಿ ಬ್ಯಾಂಕ್‌ಗಳಿಂದ‌ 2 ತಿಂಗಳಲ್ಲಿ ₹ 6 ಲಕ್ಷ ಕೋಟಿ ಸಾಲ ಮಂಜೂರು: ನಿರ್ಮಲಾ

ಪಿಟಿಐ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸ್ವಾಮ್ಯದ ಬ್ಯಾಂಕ್‌ಗಳು ಎರಡು ತಿಂಗಳಲ್ಲಿ ಆರ್ಥಿಕತೆಯ ವಿವಿಧ ವಲಯಗಳಿಗೆ ₹ 5.95 ಲಕ್ಷ ಕೋಟಿ ಮೊತ್ತದ ಸಾಲ ಮಂಜೂರು ಮಾಡಿವೆ.

‘ಕೋವಿಡ್‌–19’ ಪಿಡುಗಿನಿಂದ ತೀವ್ರವಾಗಿ ಬಾಧಿತವಾಗಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ಕೃಷಿ ಮತ್ತು ಕಾರ್ಪೊರೇಟ್‌ಗಳು ಈ ಸಾಲ ಮಂಜೂರಾತಿಯ ಪ್ರಯೋಜನ ಪಡೆಯಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿದ್ದಾರೆ.

‘ಎಂಎಸ್‌ಎಂಇ’ಗಳ 46.74 ಲಕ್ಷಕ್ಕೂ ಹೆಚ್ಚು ಖಾತೆಗಳು, ರಿಟೇಲ್‌, ಕೃಷಿ ಮತ್ತು ದೊಡ್ಡ ಕೈಗಾರಿಕೆಗಳಿಗೆ ಸಾಲ ಮಂಜೂರು ಮಾಡಲಾಗಿದೆ.ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ₹ 1.18 ಲಕ್ಷ ಕೋಟಿ ಮೊತ್ತದ ಸಾಲದ ನೆರವು ಪಡೆದಿವೆ.

ADVERTISEMENT

ತುರ್ತು ಸಾಲ ಮತ್ತು ದುಡಿಯುವ ಬಂಡವಾಳ ಹೆಚ್ಚಿಸಲು ಬ್ಯಾಂಕ್‌ಗಳು ಮಾರ್ಚ್‌ 20ರಿಂದ ಮೇ 8ರ ಅವಧಿಯಲ್ಲಿ ಶೇ 97ರಷ್ಟು ಸಾಲಗಾರರನ್ನು ಸಂಪರ್ಕಿಸಿ, ₹ 65,879 ಕೋಟಿ ಮೊತ್ತದ ಸಾಲ ಮಂಜೂರು ಮಾಡಿವೆ.

ಅಂಕಿ ಅಂಶ

46.75 ಲಕ್ಷಕ್ಕೂ ಹೆಚ್ಚು: ಸಾಲ ಮಂಜೂರಾತಿ ಪಡೆದ ಎಂಎಸ್‌ಎಂಇ ಖಾತೆಗಳು

₹ 1.18 ಲಕ್ಷ ಕೋಟಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನೆರವು

₹ 65,879 ಕೋಟಿ: ಮಂಜೂರಾದ ತುರ್ತು ಸಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.