ADVERTISEMENT

ಆತ್ಮನಿರ್ಭರ್ ಭಾರತ್: ₹2,673 ಕೋಟಿ ಮೌಲ್ಯದ ಆರ್ಡರ್‌ ಪಡೆದ ಬಿಇಎಲ್‌

ಪಿಟಿಐ
Published 22 ಡಿಸೆಂಬರ್ 2023, 16:14 IST
Last Updated 22 ಡಿಸೆಂಬರ್ 2023, 16:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ಮತ್ತು ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ ಲಿಮಿಟೆಡ್‌ನಿಂದ ₹2,673 ಕೋಟಿ ಮೌಲ್ಯದ ಉಪಕರಣಗಳನ್ನು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಶುಕ್ರವಾರ ತಿಳಿಸಿದೆ.

ಬಿಇಎಲ್‌ ತಯಾರಿಸಿದ ಉಪಕರಣಗಳು ‘ಆತ್ಮನಿರ್ಭರ್ ಭಾರತ್’ ಕಾರ್ಯಕ್ರಮದ ಭಾಗವಾಗಿವೆ ಎಂದು ಷೇರುಪೇಟೆಗೆ ಕಂಪನಿ ತಿಳಿಸಿದೆ.

ಮುಂದಿನ ತಲೆಮಾರಿನ ಜಲಗಸ್ತು ನೌಕೆಗಳಲ್ಲಿ (ಎನ್‌ಜಿಒಪಿವಿ) ಬಳಸಲು 14 ರೀತಿಯ ಸೆನ್ಸರ್‌ಗಳ ಪೂರೈಕೆ ಮಾಡಲು ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ (₹1,701 ಕೋಟಿ) ಮತ್ತು ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ (₹972 ಕೋಟಿ) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಇಎಲ್‌ ತಿಳಿಸಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಇಎಲ್‌ ₹25,935 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.