ADVERTISEMENT

ಭಾರತ್‌–22 ಇಟಿಎಫ್‌ ನಾಲ್ಕನೇ ಕಂತು ಆರಂಭ

ಪಿಟಿಐ
Published 2 ಅಕ್ಟೋಬರ್ 2019, 20:30 IST
Last Updated 2 ಅಕ್ಟೋಬರ್ 2019, 20:30 IST
   

ನವದೆಹಲಿ: ಕೇಂದ್ರೋದ್ಯಮಗಳ ಭಾರತ್‌–22ಇಟಿಎಫ್‌ನ ನಾಲ್ಕನೇ ಕಂತನ್ನು ಕೇಂದ್ರ ಸರ್ಕಾರವು ಗುರುವಾರ ಬಿಡುಗಡೆ ಮಾಡಲಿದೆ. ಇದರಿಂದ ₹ 8 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಐಸಿಐಸಿಐ ಪ್ರ್ಯುಡೆನ್ಶಿಯಲ್‌ ಫಂಡ್‌ ಇದರ ನಿರ್ವಹಣೆ ಮಾಡಲಿದೆ.‌

ಮೂರನೇ ಕಂತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ನಾಲ್ಕನೇ ಹಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ADVERTISEMENT

ಭಾರತ್‌–22ಇಟಿಎಫ್‌ನಲ್ಲಿ ಮುಖ್ಯವಾಗಿ ಒಎನ್‌ಜಿಸಿ, ಐಒಸಿ, ಎಸ್‌ಬಿಐ, ಬಿಪಿಸಿಎಲ್‌, ಕೋಲ್‌ ಇಂಡಿಯಾ ಮತ್ತು ನ್ಯಾಲ್ಕೊ ಕಂಪನಿಗಳಿವೆ. 2017 ನವೆಂಬರ್‌ನಲ್ಲಿ ₹ 14,500 ಕೋಟಿ, 2018 ಜೂನ್‌ನಲ್ಲಿ ₹ 8,400 ಕೋಟಿ ಹಾಗೂ 2019ರ ಫೆಬ್ರುವರಿಯಲ್ಲಿ ‌₹ 3,500 ಕೋಟಿ ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.