
ಪಿಟಿಐ
ಭಾರತ್ ಟ್ಯಾಕ್ಸಿ
ನವದೆಹಲಿ: ‘ಜನವರಿ ಅಂತ್ಯದ ವೇಳೆಗೆ ‘ಭಾರತ್ ಟ್ಯಾಕ್ಸಿ’ ಸೇವೆಯನ್ನು ದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ಆರಂಭಿಸಲಾಗುವುದು’ ಎಂದು ಕೇಂದ್ರ ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ್ ಕುಮಾರ್ ಬನ್ಸಲ್ ಹೇಳಿದ್ದಾರೆ.
ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಕೆಲಸ ನಿರ್ವಹಿಸುವ ‘ಭಾರತ್ ಟ್ಯಾಕ್ಸಿ’ ಆ್ಯಪ್ ಅನ್ನು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಸಹಕಾರ ಟ್ಯಾಕ್ಸಿ ಕೋ–ಆಪರೇಟಿವ್ ಲಿಮಿಟೆಡ್ ಈ ಆ್ಯಪ್ ಅನ್ನು ನಿರ್ವಹಿಸಲಿದೆ.
ಈ ಪ್ರಾಯೋಗಿಕ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಅಧಿಕೃತ ಸೇವೆಗೆ ಈ ತಿಂಗಳ ಅಂತ್ಯದ ವೇಳೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಆ್ಯಪ್‌ನಲ್ಲಿ ಈಗಾಗಲೇ 1.4 ಲಕ್ಷಕ್ಕೂ ಅಧಿಕ ಚಾಲಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.