
ಪ್ರಜಾವಾಣಿ ವಾರ್ತೆ
ಬೆಂಗಳೂರು: ಬ್ಯಾಂಕೇತರ ಹಣಕಾಸು ಕಂಪನಿಯಾಗಿರುವ (ಎನ್‌ಬಿಎಫ್‌ಸಿ) ಏರ್‌ಟೆಲ್ ಮನಿ ಲಿಮಿಟೆಡ್‌ನಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ₹20 ಸಾವಿರ ಕೋಟಿ ತೊಡಗಿಸುವುದಾಗಿ ಭಾರ್ತಿ ಏರ್‌ಟೆಲ್ ಸೋಮವಾರ ಪ್ರಕಟಿಸಿದೆ.
ಡಿಜಿಟಲ್ ವೇದಿಕೆಯ ಮೂಲಕ ಹಣಕಾಸಿನ ಸೇವೆಗಳನ್ನು ದೇಶದಾದ್ಯಂತ ಇನ್ನಷ್ಟು ಹೆಚ್ಚು ಒದಗಿಸಲು ಏರ್‌ಟೆಲ್ ಉದ್ದೇಶಿಸಿದೆ.
ಭಾರ್ತಿ ಏರ್‌ಟೆಲ್ ಕಂಪನಿಯು ಏರ್‌ಟೆಲ್ ಮನಿ ವೇದಿಕೆಯ ಮೂಲಕ ಈಗಾಗಲೇ ₹9,000 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಸಾಲದ ರೂಪದಲ್ಲಿ ವಿತರಣೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಏರ್‌ಟೆಲ್ ಮನಿ ಕಂಪನಿಗೆ ಆರ್‌ಬಿಐ ಕಡೆಯಿಂದ ಎನ್‌ಬಿಎಫ್‌ಸಿ ಪ್ರಮಾಣಪತ್ರವು ಫೆಬ್ರುವರಿ 13ರಂದು ಸಿಕ್ಕಿದೆ.