ADVERTISEMENT

ಏರ್‌ಟೆಲ್‌ ಲಾಭ ₹ 854 ಕೋಟಿ

ಪಿಟಿಐ
Published 3 ಫೆಬ್ರುವರಿ 2021, 18:18 IST
Last Updated 3 ಫೆಬ್ರುವರಿ 2021, 18:18 IST

ನವದೆಹಲಿ: ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರ್ತಿ ಏರ್‌ಟೆಲ್‌ ಕಂಪನಿಯ ಒಟ್ಟು ₹ 854 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 1,035 ಕೋಟಿ ನಷ್ಟ ದಾಖಲಿಸಿತ್ತು.

‘2020ರಲ್ಲಿ ಹಿಂದೆಂದೂ ಕಾಣದಂತಹ ಅನಿಶ್ಚಿತ ವಾತಾವರಣ ಇದ್ದರೂ, ನಾವು ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಳ್ಳೆಯ ಸಾಧನೆ ತೋರಿದ್ದೇವೆ’ ಎಂದು ಏರ್‌ಟೆಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೋಪಾಲ್ ವಿಟ್ಠಲ್ ಹೇಳಿದ್ದಾರೆ.

ಸರಿಸುಮಾರು ನಾಲ್ಕು ವರ್ಷಗಳ ಅಂತರದ ನಂತರ ಏರ್‌ಟೆಲ್‌ ಕಂಪನಿಯು ಹೊಸ ಚಂದಾದಾರರನ್ನು ಪಡೆಯುವಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಪ್ರತಿ ಗ್ರಾಹಕನಿಂದ ಕಂಪನಿಗೆ ಬರುವ ಆದಾಯವು 166ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು 1.3 ಕೋಟಿ ಹೊಸ 4ಜಿ ಗ್ರಾಹಕರನ್ನು ಪಡೆದುಕೊಂಡಿದೆ.

ADVERTISEMENT

ಡಿಸೆಂಬರ್‌ ಕೊನೆಯ ವೇಳೆಗೆ ಕಂಪನಿ ಹೊಂದಿದ್ದ ಸಾಲದ ಮೊತ್ತ ₹ 1.47 ಲಕ್ಷ ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.