ADVERTISEMENT

ಬಿಎಚ್‌ಇಎಲ್‌ಗೆ ನಷ್ಟ

ಪಿಟಿಐ
Published 13 ಜೂನ್ 2020, 12:56 IST
Last Updated 13 ಜೂನ್ 2020, 12:56 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌‌ ಲಿಮಿಟೆಡ್‌ (ಬಿಎಚ್‌ಇಎಲ್‌) ಮಾರ್ಚ್‌ ತ್ರೈಮಾಸಿಕದಲ್ಲಿ ₹ 1,532 ಕೋಟಿ ನಷ್ಟ ಅನುಭವಿಸಿದೆ.

ವರಮಾನದಲ್ಲಿ ಇಳಿಕೆ ಮತ್ತು ತೆರಿಗೆ ಬಾಕಿಯಿಂದಾಗಿ ನಷ್ಟವಾಗಿದೆ ಎಂದು ಹೇಳಿದೆ.2019ರ ಮಾರ್ಚ್‌ ಅಂತ್ಯಕ್ಕೆ ₹ 681 ಕೋಟಿ ನಿವ್ವಳ ಲಾಭ ಗಳಿಸಿತ್ತು.

ತ್ರೈಮಾಸಿಕದಲ್ಲಿ ಒಟ್ಟಾರೆ ವರಮಾನ ₹ 5,193.51 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ವರಮಾನ ₹ 10,489 ಕೋಟಿ ಇತ್ತು.

ADVERTISEMENT

2019–20ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ನಷ್ಟ ₹ 1,468 ಕೋಟಿಗಳಷ್ಟಿದೆ. 2018–19ರಲ್ಲಿ ₹ 1,002 ಕೋಟಿ ಲಾಭ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.