
ಪಿಟಿಐ
ನವದೆಹಲಿ: ಮುಂದಿನ ಆರ್ಥಿಕ ವರ್ಷದಲ್ಲಿ ಜೈವಿಕ ಅನಿಲ ವಲಯವು ₹5 ಸಾವಿರ ಕೋಟಿಗೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಜೈವಿಕ ಅನಿಲ ಸಂಘ (ಐಬಿಎ) ಹೇಳಿದೆ.
ಇಲ್ಲಿಯವರೆಗೆ, 100ಕ್ಕೂ ಹೆಚ್ಚು ಕಂಪ್ರೆಸ್ಡ್ ಜೈವಿಕ ಅನಿಲ (ಸಿಬಿಜಿ) ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಹೂಡಿಕೆದಾರರು ವಲಯದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದೆ.
2024–25ರ ಆರ್ಥಿಕ ವರ್ಷದಲ್ಲಿ 94 ಕಂಪ್ರೆಸ್ಡ್ ಜೈವಿಕ ಅನಿಲ ಘಟಕಗಳು 31,400 ಟನ್‌ಗೂ ಅಧಿಕ ಕಂಪ್ರೆಸ್ಡ್ ಜೈವಿಕ ಅನಿಲವನ್ನು ಮಾರಾಟ ಮಾಡಿವೆ. ಇದು ವಲಯದ ಬೆಳವಣಿಗೆ ಮತ್ತು ಮಾರುಕಟ್ಟೆ ಏರಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ.
2026ರಲ್ಲಿ ಸಿಬಿಜಿ ಉದ್ಯಮದ ಗಾತ್ರವು ₹35,831 ಕೋಟಿಯಾಗಬಹುದು. 2030ರ ವೇಳೆಗೆ ₹44,788 ಕೋಟಿಯಷ್ಟಾಗಬಹುದು ಎಂದು ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.