ADVERTISEMENT

ಬಿಟ್‌ಕಾಯಿನ್‌ ಮೌಲ್ಯ 1 ಲಕ್ಷ ಡಾಲರ್‌ಗೆ ಏರಿಕೆ

ಪಿಟಿಐ
Published 5 ಡಿಸೆಂಬರ್ 2024, 14:09 IST
Last Updated 5 ಡಿಸೆಂಬರ್ 2024, 14:09 IST
ಬಿಟ್‌ಕಾಯಿನ್‌
ಬಿಟ್‌ಕಾಯಿನ್‌   

ನ್ಯೂಯಾರ್ಕ್‌ : ಬಿಟ್‌ಕಾಯಿನ್‌ ಮೌಲ್ಯವು ಗುರುವಾರದ ವಹಿವಾಟಿನಲ್ಲಿ 1 ಲಕ್ಷ ಅಮೆರಿಕನ್‌ ಡಾಲರ್‌ಗೆ (₹84.70 ಲಕ್ಷ) ಮುಟ್ಟಿದೆ.

ಕೋವಿಡ್‌ ವೇಳೆ ಬಿಟ್‌ಕಾಯಿನ್ ಮೌಲ್ಯವು 5 ಸಾವಿರ ಡಾಲರ್ (₹4.23 ಲಕ್ಷ) ಇತ್ತು. ಎರಡು ವರ್ಷದ ಹಿಂದೆ 17 ಸಾವಿರ ಡಾಲರ್ (₹14.40 ಲಕ್ಷ) ಇತ್ತು. ನವೆಂಬರ್‌ 5ರಂದು ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ದಿನದಂದು ಇದರ ಮೌಲ್ಯವು 69,374 ಡಾಲರ್‌ಗೆ (₹58.76 ಲಕ್ಷ) ಮುಟ್ಟಿತ್ತು ಎಂದು ಕ್ರಿಪ್ಟೊಕರೆನ್ಸಿ ಬಗ್ಗೆ ಮಾಹಿತಿ ನೀಡುವ ಸುದ್ದಿಸಂಸ್ಥೆ ಕಾಯಿನ್‌ಡೆಸ್ಕ್‌ ತಿಳಿಸಿದೆ. 

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕ್ರಿಪ್ಟೊಕರೆನ್ಸಿ ಪರ ಹೆಚ್ಚು ಒಲವು ಹೊಂದಿದ್ದಾರೆ. ಚುನಾವಣೆ ಪ್ರಚಾರ ವೇಳೆ ಅವರು ಕ್ರಿಪ್ಟೊಕರೆನ್ಸಿ ಸ್ನೇಹಿ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು. ಇದಕ್ಕಾಗಿ ವರ್ಲ್ಡ್‌ ಲಿಬರ್ಟಿ ಫೈನಾನ್ಶಿಯಲ್‌ ಹೆಸರಿನ ಡಿಜಿಟಲ್‌ ಕರೆನ್ಸಿ ವೇದಿಕೆಯನ್ನು ಆರಂಭಿಸಿದ್ದರು.

ADVERTISEMENT

ಕ್ರಿಪ್ಟೊಕರೆನ್ಸಿ ಸಲಹೆಗಾರ ಪೌಲ್‌ ಅತ್ಕಿನ್ಸ್‌ ಅವರನ್ನು ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಬಿಟ್‌ಕಾಯಿನ್‌ ಮೌಲ್ಯ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.