ADVERTISEMENT

ಎಸ್‌ಕೆಎಫ್‌ ಇಂಡಿಯಾಗೆ ಲಾಭ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 16:26 IST
Last Updated 30 ಅಕ್ಟೋಬರ್ 2018, 16:26 IST

ಬೆಂಗಳೂರು: ಎಸ್‌ಕೆಎಫ್‌ ಇಂಡಿಯಾ ಸಂಸ್ಥೆಯು ಎರಡನೇ ತ್ರೈಮಾಸಿಕದಲ್ಲಿ ₹ 84 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ₹ 73.96 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 13.98ರಷ್ಟು ಹೆಚ್ಚಾಗಿದೆ. ಮಾರಾಟ ಮೊತ್ತ ₹ 766 ಕೋಟಿಗೆ
ಶೇ 12.68ರಷ್ಟು ಏರಿಕೆಯಾಗಿದೆ.

ಭಾರತಿ ಸಿಮೆಂಟ್‌ ಹೊಸ ಉತ್ಪನ್ನ

ADVERTISEMENT

ಭಾರತಿಸಿಮೆಂಟ್, ತನ್ನ ಹೊಸ ಉತ್ಪನ್ನ ‘ಅಲ್ಟ್ರಾ ಫಾಸ್ಟ್‌’ ಸಿಮೆಂಟ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಕಾಂಕ್ರೀಟ್ ಸ್ಲ್ಯಾಬ್‍, ಬೀಮ್ಸ್ ಮತ್ತು ಭಾರಿ ಭಾರ ತಡೆಯುವಂತಹ ಗರಿಷ್ಠ ಕಾರ್ಯಕ್ಷಮತೆಯ ಕಟ್ಟಡ ಮತ್ತುಸಿಮೆಂಟ್ಇಟ್ಟಿಗೆ ಉತ್ಪಾದನೆಗೆ ಇದು ಹೆಚ್ಚು ಸೂಕ್ತವಾಗಿದೆ’ ಎಂದು ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಎಂ. ರವೀಂದರ್ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.