ಮುಂಬೈ: ಕಳೆದ ವರ್ಷ ದೇಶದಲ್ಲಿ ಬ್ಲೂ–ಕಾಲರ್ ಕ್ಷೇತ್ರದಲ್ಲಿನ ಗಿಗ್ ಉದ್ಯೋಗಿಗಳ ನೇಮಕಾತಿಯು ಶೇ 92ರಷ್ಟು ಏರಿಕೆಯಾಗಿದೆ ಎಂದು ಉದ್ಯೋಗ ಪೋರ್ಟಲ್ ವರ್ಕ್‌ಇಂಡಿಯಾ ಶನಿವಾರ ತಿಳಿಸಿದೆ.
ಕಚೇರಿಯ ವ್ಯವಸ್ಥೆ ಇಲ್ಲದೆ ಕಟ್ಟಡ ನಿರ್ಮಾಣ, ಡ್ರೈವಿಂಗ್, ಕಾರ್ಖಾನೆಗಳಲ್ಲಿ ದೈಹಿಕ ಕೆಲಸ ನಿರ್ವಹಿಸುವವರನ್ನು ಬ್ಲೂ ಕಾಲರ್ ಉದ್ಯೋಗಿಗಳೆಂದು ಕರೆಯಲಾಗುತ್ತದೆ.
ಇ–ಕಾಮರ್ಸ್, ಆಹಾರ ವಿತರಣೆ, ವಾಹನ ಸಂಚಾರದ ಸೇವೆ ಒದಗಿಸುವ ವೇದಿಕೆಗಳ ಕ್ಷಿಪ್ರ ವಿಸ್ತರಣೆಯಿಂದ ನೇಮಕಾತಿ ಹೆಚ್ಚಳಗೊಂಡಿದೆ ಎಂದು ತಿಳಿಸಿದೆ.
‘ಕ್ವಿಕ್ ಕಾಮರ್ಸ್ ವಲಯವು ವಿಶ್ವಾಸಾರ್ಹವಾದ ಆದಾಯದ ಮೂಲವಾಗಿದೆ. ಸಣ್ಣ ನಗರಗಳಲ್ಲಿನ ಹಲವರಿಗೆ ಈ ಉದ್ಯೋಗವು ಆಯ್ಕೆ ಆಗಿದೆ’ ಎಂದು ವರ್ಕ್‌ಇಂಡಿಯಾ ಸಿಇಒ ಮತ್ತು ಸಹ ಸಂಸ್ಥಾಪಕ ನೀಲೇಶ್ ಡುಂಗರ್ವಾಲ್ ಹೇಳಿದ್ದಾರೆ.
2023 ಮತ್ತು 2024ರಲ್ಲಿ ವೇದಿಕೆಯು 4.81 ಲಕ್ಷ ಉದ್ಯೋಗಗಳನ್ನು ನೀಡಿದೆ. ದೆಹಲಿ, ಅಹಮದಾಬಾದ್ ಮತ್ತು ಕೋಲ್ಕತ್ತವು ಈ ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಶೇ 100ರಷ್ಟು ಉದ್ಯೋಗ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.
ಗಿಗ್ ಕೆಲಸಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಲ್ಲಿ ಪದವೀಧರರ ಪ್ರಮಾಣ ಹೆಚ್ಚಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.