ADVERTISEMENT

ಏಪ್ರಿಲ್‌ 1ರಿಂದ ಕಾರು ಬೆಲೆ ಏರಿಕೆ: ಬಿಎಂಡಬ್ಲ್ಯು

ಪಿಟಿಐ
Published 25 ಮಾರ್ಚ್ 2022, 15:46 IST
Last Updated 25 ಮಾರ್ಚ್ 2022, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಮಾದರಿಗಳ ಬೆಲೆಯನ್ನು ಶೇಕಡ 3.5ರವೆಗೆ ಹೆಚ್ಚಳ ಮಾಡುವುದಾಗಿ ಶುಕ್ರವಾರ ಹೇಳಿದೆ.

ಸರಕು ಮತ್ತು ಸಾಗಣೆ ವೆಚ್ಚಗಳಲ್ಲಿ ಆಗಿರುವ ಹೆಚ್ಚಳ ಹಾಗೂ ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ವಿನಿಮಯ ದರದಲ್ಲಿ ಆಗಿರುವ ಬದಲಾವಣೆಯ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT