ADVERTISEMENT

ಆರು ತಿಂಗಳಲ್ಲಿ ಮೂರು ಎಲೆಕ್ಟ್ರಿಕ್‌ ವಾಹನ: ಬಿಎಂಡಬ್ಲ್ಯು

ಪಿಟಿಐ
Published 25 ನವೆಂಬರ್ 2021, 16:07 IST
Last Updated 25 ನವೆಂಬರ್ 2021, 16:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಬಿಎಂಡಬ್ಲ್ಯು ಕಂಪನಿಯು ದೇಶದಲ್ಲಿ ತನ್ನ ವಿದ್ಯುತ್‌ ಚಾಲಿತ ವಾಹನಗಳ ಪಯಣಕ್ಕೆ ವೇಗ ನೀಡಲು ಮುಂದಿನ ಆರು ತಿಂಗಳಿನಲ್ಲಿ ಮೂರು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ತಿಳಿಸಿದೆ.

ಸಂಪೂರ್ಣ ವಿದ್ಯುತ್‌ ಚಾಲಿತ ಎಸ್‌ಯುವಿ ‘ಬಿಎಂಡಬ್ಲ್ಯು ಐಎಕ್ಸ್‌’ಅನ್ನು 30 ದಿನಗಳಲ್ಲಿ, ಮಿನಿ ಎಲೆಕ್ಟ್ರಿಕ್‌ ವಾಹನವನ್ನು90 ದಿನಗಳಲ್ಲಿ ಹಾಗೂ ವಿದ್ಯುತ್ ಚಾಲಿತ ಮೊದಲ ಸೆಡಾನ್ ‘ಎಲೆಕ್ಟ್ರಿಕ್‌ ಐ4’ ಮಾದರಿಯನ್ನು180 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ ವಿಕ್ರಂ ಪವ್ಹಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT