
ನವದೆಹಲಿ: ‘ಭಾರತದ ಮಾರುಕಟ್ಟೆಯಲ್ಲಿ ಅಮೆರಿಕದ ವಿಮಾನ ತಯಾರಕ ಕಂಪನಿ ಬೋಯಿಂಗ್‌ನ ಡ್ರೀಮ್‌ಲೈನರ್ ಮಾದರಿಗೆ ಉಜ್ವಲ ಭವಿಷ್ಯವಿದೆ’ ಎಂದು ಬೋಯಿಂಗ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಸಲೀಲ್ ಗುಪ್ತೆ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕಂಪನಿಯ ಡ್ರೀಮ್‌ಲೈನರ್ ಮಾದರಿಗೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ. ಅಲ್ಲದೆ, ಕಂಪನಿಯು ಸುಸ್ಥಿರ ಬೆಳವಣಿಗೆ ಕಾಣಲಿದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಡ್ರೀಮ್‌ಲೈನರ್ ಎಂದು ಕರೆಯಲಾಗುವ ‘ಬೋಯಿಂಗ್ 787’ ವಿಮಾನಗಳನ್ನು ಭಾರತದಲ್ಲಿ ಏರ್ ಇಂಡಿಯಾ ವಿಮಾನಯಾನ ಕಂಪನಿಯು ಬಳಕೆ ಮಾಡುತ್ತಿದೆ. ಏರ್ ಇಂಡಿಯಾ 33 ಡ್ರೀಮ್‌ಲೈನರ್ ವಿಮಾನಗಳನ್ನು ಹೊಂದಿದೆ. ಇಂಡಿಗೊ ಕೂಡ ಈ ಮಾದರಿಯ ಕೆಲವು ವಿಮಾನಗಳನ್ನು ಬಳಸುತ್ತಿದೆ.
ಕಳೆದ ವರ್ಷದ ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್‌ಇಂಡಿಯಾದ ಡ್ರೀಮ್‌ಲೈನರ್ ಅಪಘಾತಕ್ಕೆ ಒಳಗಾಗಿತ್ತು. 260 ಜನರು ಮೃತಪಟ್ಟಿದ್ದರು. ಈ ವಿಮಾನ ಅಪಘಾತದ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಬೋಯಿಂಗ್‌ಗೆ 2025 ಸವಾಲಿನ ವರ್ಷ ಎಂದು ಗುಪ್ತೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.