ADVERTISEMENT

ಡಿಸೆಂಬರ್‌ ತ್ರೈಮಾಸಿಕ: ಬಾಷ್‌ ಲಾಭ ಶೇ 27ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 10:19 IST
Last Updated 12 ಫೆಬ್ರುವರಿ 2022, 10:19 IST
ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ
ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ   

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿ ಇರುವ ಬಾಷ್‌ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 234.79 ಕೋಟಿಗಳಷ್ಟು ತೆರಿಗೆ ನಂತರದ ಲಾಭ (ಪಿಎಟಿ) ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 184.15 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 27.43ರಷ್ಟು ಹೆಚ್ಚಾಗಿದೆ. ಕಾರ್ಯಾಚರಣಾ ವರಮಾನವು ₹ 3,029.64 ಕೋಟಿಗಳಿಂದ ₹ 3,109 ಕೋಟಿಗಳಿಗೆ ಶೇ 2.6ರಷ್ಟು ಏರಿಕೆ ಆಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯು ದೇಶದಲ್ಲಿ ತನ್ನ 100 ವರ್ಷಗಳ ಪ್ರಯಾಣದಲ್ಲಿ ‘ಭಾರತದಲ್ಲೇ ತಯಾರಿಸಿ’ ಜೊತೆಗೆ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.