ADVERTISEMENT

ಬೌನ್ಸ್‌ ಇನ್‌ಫಿನಿಟಿ ಡಿಸೆಂಬರ್‌ 2ಕ್ಕೆ ಅನಾವರಣ

ಪಿಟಿಐ
Published 21 ನವೆಂಬರ್ 2021, 15:42 IST
Last Updated 21 ನವೆಂಬರ್ 2021, 15:42 IST

ಮುಂಬೈ: ಬಾಡಿಗೆ ಆಧಾರದಲ್ಲಿ ದ್ವಿಚಕ್ರ ವಾಹನಗಳ ಸೇವೆ ಒದಗಿಸುವ ಬೌನ್ಸ್‌ ಕಂಪನಿಯು ತಯಾರಿಸಲಿರುವ ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನ ‘ಇನ್‌ಫಿನಿಟಿ’ ಡಿಸೆಂಬರ್‌ನಲ್ಲಿ ಅನಾವರಣ ಆಗಲಿದೆ. ಈ ಇ.ವಿ. ಗ್ರಾಹಕರ ಕೈಗೆ 2022ರ ಆರಂಭದಲ್ಲಿ ಸಿಗುವ ಸಾಧ್ಯತೆ ಇದೆ.

ಬೆಂಗಳೂರು ಮೂಲದ ಬೌನ್ಸ್ ಕಂಪನಿಯು ‘22ಮೋಟರ್ಸ್’ ಕಂಪನಿಯನ್ನು ಹಾಗೂ ಅದು ರಾಜಸ್ಥಾನದ ಭಿವಡಿಯಲ್ಲಿ ಹೊಂದಿರುವ ತಯಾರಿಕಾ ಘಟಕವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ದ್ವಿಚಕ್ರ ವಾಹನ ತಯಾರಿಕೆಗೆ ಒಂದು ಘಟಕ ಆರಂಭಿಸುವ ಆಲೋಚನೆ ತನಗೆ ಇದೆ ಎಂದೂ ಬೌನ್ಸ್ ತಿಳಿಸಿದೆ.

ಬೌನ್ಸ್ ಇನ್‌ಫಿನಿಟಿ ದ್ವಿಚಕ್ರ ವಾಹನವು ಡಿಸೆಂಬರ್ 2ರಂದು ಅನಾವರಣ ಆಗಲಿದೆ. ಅದೇ ದಿನದಿಂದ ಬುಕಿಂಗ್‌ ಅವಕಾಶ ಕೂಡ ಲಭ್ಯವಾಗಲಿದೆ. ₹ 499 ಪಾವತಿಸಿ ಈ ದ್ವಿಚಕ್ರ ವಾಹನವನ್ನು ಬುಕ್ ಮಾಡಬಹುದು. ಇವು ಭಾರತದಲ್ಲೇ ತಯಾರಾಗಲಿವೆ ಎಂದು ಬೌನ್ಸ್ ಪ್ರಕಟಣೆ ತಿಳಿಸಿದೆ.

ADVERTISEMENT

ವಾಹನದಿಂದ ಹೊರಕ್ಕೆ ತೆಗೆಯಬಹುದಾದ ಲಿಥಿಯಮ್–ಅಯಾನ್ ಬ್ಯಾಟರಿಯನ್ನು ಈ ಸ್ಕೂಟರ್ ಹೊಂದಿರಲಿದೆ. ಬ್ಯಾಟರಿ ಇಲ್ಲದ ಸ್ಕೂಟರ್‌ಅನ್ನು ಗ್ರಾಹಕರು ಕಡಿಮೆ ಬೆಲೆಗೆ ಖರೀದಿಸಬಹುದು. ನಂತರ, ಬೌನ್ಸ್‌ ಬ್ಯಾಟರಿ ಸ್ವ್ಯಾ‍ಪಿಂಗ್ ಜಾಲವನ್ನು ಬಳಸಿಕೊಂಡು ವಾಹನ ಚಲಾಯಿಸಬಹುದು. ಆಗ ಅವರು ಬ್ಯಾಟರಿ ಸ್ವ್ಯಾಪಿಂಗ್‌ಗೆ ಮಾತ್ರ ಹಣ ಪಾವತಿಸಿದರೆ ಸಾಕು ಎಂದೂ ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.