ADVERTISEMENT

ಮಧ್ಯಂತರ ಲಾಭಾಂಶ ಘೋಷಿಸಿದ ಬ್ರಿಟಾನಿಯಾ

ಪಿಟಿಐ
Published 17 ಆಗಸ್ಟ್ 2020, 15:54 IST
Last Updated 17 ಆಗಸ್ಟ್ 2020, 15:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆಯ ಉತ್ಪನ್ನ (ಎಫ್‌ಎಂಸಿಜಿ) ವಲಯದ ಪ್ರಮುಖ ಕಂಪನಿ ಬ್ರಿಟಾನಿಯಾ, ಪ್ರತಿ ಷೇರಿಗೆ ₹ 83ರಂತೆ ಮಧ್ಯಂತರ ಲಾಭಾಂಶ ಘೋಷಣೆ ಮಾಡಿದೆ.

ಸೋಮವಾರ ನಡೆದ ಕಂಪನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ, 2020–21ನೇ ಹಣಕಾಸು ವರ್ಷಕ್ಕೆ ₹ 1ರ ಮುಖಬೆಲೆಯ ಪ್ರತಿ ಷೇರಿಗೆ ₹ 83ರಂತೆ ಮಧ್ಯಂತರ ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಅಸುರಕ್ಷಿತ, ಪರಿವರ್ತಿಸಲಾಗದ, ಪುನಃ ಪಡೆಯಬಹುದಾದ ಸಾಲಪತ್ರಗಳನ್ನು ಬೋನಸ್‌ ರೂಪದಲ್ಲಿ ನೀಡಲು ಸಹ ಒಪ್ಪಿಗೆ ದೊರೆತಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.