ADVERTISEMENT

ಬಿಎಸ್‌ಇ ಬಂಡವಾಳ ಮೌಲ್ಯ ₹231 ಲಕ್ಷ ಕೋಟಿಗೆ ಏರಿಕೆ

ಷೇರುಪೇಟೆಗಳಲ್ಲಿ ದಾಖಲೆ ಮಟ್ಟದ ವಹಿವಾಟು

ಪಿಟಿಐ
Published 15 ಜೂನ್ 2021, 13:44 IST
Last Updated 15 ಜೂನ್ 2021, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಷೇರುಪೇಟೆಗಳು ಮಂಗಳವಾರ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 222 ಅಂಶ ಹೆಚ್ಚಾಗಿ 52,773 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತು. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯವು ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 231 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 58 ಅಂಶ ಹೆಚ್ಚಾಗಿ ದಾಖಲೆಯ 15,869 ಅಂಶಗಳಿಗೆ ತಲುಪಿತು.

ADVERTISEMENT

‘ಹಣಕಾಸು, ಎಫ್‌ಎಂಸಿಜಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಮೌಲ್ಯವು ಚೇತರಿಕೆ ಕಂಡಿದ್ದರಿಂದ ಷೇರುಪೇಟೆ ವಹಿವಾಟು ಹೊಸ ಎತ್ತರವನ್ನು ತಲುಪಿದವು. ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿರುವುದು ಹಾಗೂ ಆರ್ಥಿಕ ಚೇತರಿಕೆಯ ನಿರೀಕ್ಷೆಗಳಿಂದಾಗಿ ಕಳೆದ ಕೆಲವು ವಾರಗಳಿಂದ ಷೇರುಪೇಟೆಗಳಲ್ಲಿ ಉತ್ತಮ ಖರೀದಿ ವಹಿವಾಟು ನಡೆಯುತ್ತಿದೆ’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೊದ್‌ ನಾಯರ್‌ ಹೇಳಿದ್ದಾರೆ.

ಮುಖ್ಯಾಂಶಗಳು
* ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.60ರಷ್ಟು ಏರಿಕೆ

* ಈ ವರ್ಷದಲ್ಲಿ ಇದುವರೆಗಿನ ಸೆನ್ಸೆಕ್ಸ್‌ ಗಳಿಕೆ ಶೇ 10.51

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.