ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿಮಿಟೆಡ್‌ಗೆ (ಬಿಎಸ್‌ಎನ್‌ಎಲ್) ಹೆಚ್ಚುವರಿ ಬಂಡವಾಳ ವೆಚ್ಚವಾಗಿ ಪ್ರಸಕ್ತ ವರ್ಷದಲ್ಲಿ ₹6,982 ಕೋಟಿ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ರಾಜ್ಯಸಭೆಗೆ ತಿಳಿಸಿದ್ದಾರೆ.
2019ರಲ್ಲಿ ₹69 ಸಾವಿರ ಕೋಟಿಯನ್ನು ಬಿಎಸ್‌ಎನ್‌ಎಲ್‌ನ ಪುನಶ್ಚೇತನಕ್ಕಾಗಿ ನೀಡಲಾಗಿತ್ತು. 2022ರಲ್ಲಿ ₹1.64 ಲಕ್ಷ ಕೋಟಿ ಮತ್ತು 2023ರಲ್ಲಿ ₹89 ಸಾವಿರ ಕೋಟಿಯನ್ನು 4ಜಿ ಹಾಗೂ 5 ಜಿ ತರಂಗಾತರ ಹಂಚಿಕೆಗಾಗಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ದೇಶದೆಲ್ಲೆಡೆ 4ಜಿ ನೆಟ್‌ವರ್ಕ್ ವಿಸ್ತರಿಸಲು ಹೆಚ್ಚುವರಿಯಾಗಿ ಈ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜುಲೈ 31ರ ವೇಳೆಗೆ ಬಿಎಸ್‌ಎನ್‌ಎಲ್ 96,300 ಪ್ರದೇಶದಲ್ಲಿ 4ಜಿ ಸೇವೆ ಅಳವಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.