ADVERTISEMENT

ಕ್ಯಾಂಪಾ ಶ್ಯೂರ್: ಅಮಿತಾಭ್ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 20:58 IST
Last Updated 8 ಜನವರಿ 2026, 20:58 IST
<div class="paragraphs"><p>ಕ್ಯಾಂಪಾ ಶ್ಯೂರ್‌ ಬ್ರ್ಯಾಂಡ್‌ಗೆ ಅಮಿತಾಭ್ ಬಚ್ಚನ್ ರಾ ರಿ ಆಗಿದ್ದಾರೆ</p></div>

ಕ್ಯಾಂಪಾ ಶ್ಯೂರ್‌ ಬ್ರ್ಯಾಂಡ್‌ಗೆ ಅಮಿತಾಭ್ ಬಚ್ಚನ್ ರಾ ರಿ ಆಗಿದ್ದಾರೆ

   

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎಫ್‌ಎಂಸಿಜಿ ಅಂಗಸಂಸ್ಥೆಯಾದ ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ಲಿಮಿಟೆಡ್ (ಆರ್‌ಸಿಪಿಎಲ್) ತನ್ನ ಕುಡಿಯುವ ನೀರಿನ ಬ್ರ್ಯಾಂಡ್ ಆಗಿರುವ ‘ಕ್ಯಾಂಪಾ ಶ್ಯೂರ್‌’ನ ರಾಯಭಾರಿಯಾಗಿ ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್ ಅವರನ್ನು ನೇಮಿಸಿದೆ.

ರಿಲಯನ್ಸ್‌ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಕಂಪನಿಯು ಕ್ಯಾಂಪಾ ಕೋಲಾವನ್ನು 2022ರಲ್ಲಿ ಸ್ವಾಧೀನಪಡಿಸಿಕೊಂಡಿದೆ, 2023ರಲ್ಲಿ ಈ ಬ್ರ್ಯಾಂಡ್‌ ಅಡಿಯಲ್ಲಿ ಭಾರತದ ಮಾರುಕಟ್ಟೆಗೆ ವಿವಿಧ ಉತ್ಪನ್ನಗಳನ್ನು ಮತ್ತೆ ಬಿಡುಗಡೆ ಮಾಡಿದೆ.

ADVERTISEMENT

‘ಬಚ್ಚನ್ ಅವರು ಪ್ರತಿ ಭಾರತೀಯರ ನಿಜವಾದ ಐಕಾನ್. ಅವರ ವರ್ಚಸ್ಸು ಗಡಿಗಳನ್ನು ಮೀರಿದೆ. ಕ್ಯಾಂಪಾ ಬ್ರ್ಯಾಂಡ್‌ ಸಹ ಅವರಂತೆಯೇ ಬೆಳೆಯುತ್ತಿದೆ’ ಎಂದು ಆರ್‌ಸಿಪಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೇತನ್‌ ಮೋದಿ ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.