ADVERTISEMENT

ಕೆನರಾ ಬ್ಯಾಂಕ್‌ ಎಂಸಿಎಲ್‌ಆರ್‌ ಕಡಿತ

ಪಿಟಿಐ
Published 6 ಜುಲೈ 2020, 14:41 IST
Last Updated 6 ಜುಲೈ 2020, 14:41 IST
ಬಡ್ಡಿದರ
ಬಡ್ಡಿದರ   

ಮುಂಬೈ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಸೋಮವಾರ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರ (ಎಂಸಿಎಲ್‌ಆರ್‌) ಇಳಿಕೆ ಮಾಡಿವೆ. ಪರಿಷ್ಕೃತ ಬಡ್ಡಿದರವು ಮಂಗಳವಾರದಿಂದ ಜಾರಿಗೆ ಬರಲಿವೆ.

ಕೆನರಾ ಬ್ಯಾಂಕ್‌ ತನ್ನ ‘ಎಂಸಿಎಲ್‌ಆರ್‌’ ಅನ್ನು ಶೇ 0. 10ರಷ್ಟು ಕಡಿಮೆ ಮಾಡಿದೆ. ಇದರಿಂದ ಒಂದು ವರ್ಷದ ‘ಎಂಸಿಎಲ್‌ಆರ್‌’ ಶೇ 7.65 ರಿಂದ ಶೇ 7.55 ಕ್ಕೆ ಇಳಿಕೆಯಾಗಿದೆ.

ಒಂದು ದಿನದ ಮತ್ತು ಒಂದು ತಿಂಗಳ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.10ರಷ್ಟು ತಗ್ಗಿಸಿದ್ದು, ಶೇ 7.20ಕ್ಕೆ ತಲುಪಿದೆ. ಮೂರು ತಿಂಗಳ ಬಡ್ಡಿದರವು ಶೇ 7.55 ರಿಂದ ಶೇ 7.45ಕ್ಕೆ ಇಳಿಕೆಯಾಗಿದೆ.

ADVERTISEMENT

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಶೇ 0.20ರಷ್ಟು ಇಳಿಕೆ ಮಾಡಿದ್ದು ಸಾಲ ನೀಡಿಕೆ ದರವು ಶೇ 7.70ರಿಂದ ಶೇ 7.50ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.