ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ರೆಪೊ ದರ ಆಧರಿಸಿದ ಸಾಲದ ಮೇಲಿನ ಬಡ್ಡಿದರವನ್ನು (ಆರ್‌ಬಿಎಲ್‌ಆರ್) ಶೇ 0.50ರಷ್ಟು ಕಡಿತಗೊಳಿಸಿದೆ.
ಗೃಹ ಮತ್ತು ವಾಹನ ಸಾಲದ ವಾರ್ಷಿಕ ಬಡ್ಡಿ ದರವು ಕ್ರಮವಾಗಿ ಶೇ 7.40 ಮತ್ತು ಶೇ 7.70 ಆಗಿದೆ. ಪರಿಷ್ಕೃತ ಹೊಸ ದರವು ಜೂನ್ 12ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು ಶೇ 0.50ರಷ್ಟು ಕಡಿತ ಮಾಡಿತ್ತು. ಇದರ ಬೆನ್ನಲ್ಲೇ ಬ್ಯಾಂಕ್‌ಗಳು ಬಡ್ಡಿ ದರ ತಗ್ಗಿಸಿದ್ದು, ಇದರ ಪ್ರಯೋಜನವನ್ನು ಗ್ರಾಹಕರಿಗೆ ನೀಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.