ADVERTISEMENT

ಕೆನರಾ ಬ್ಯಾಂಕ್‌ನಿಂದ ₹ 2 ಸಾವಿರ ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 14:48 IST
Last Updated 27 ಆಗಸ್ಟ್ 2022, 14:48 IST
ಕೆನರಾ ಬ್ಯಾಂಕ್‌
ಕೆನರಾ ಬ್ಯಾಂಕ್‌   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಬಾಸೆಲ್‌–3 ಟಯರ್–2, ಸೀರಿಸ್‌–1 ಬಾಂಡ್‌ ಮೂಲಕ ಒಟ್ಟು ₹ 2 ಸಾವಿರ ಕೋಟಿ ಸಂಗ್ರಹ ಮಾಡಿದೆ. ಈ ಬಾಂಡ್‌ಗಳಿಗೆ ಬ್ಯಾಂಕ್‌ ವಾರ್ಷಿಕ ಶೇಕಡ 7.48ರಷ್ಟು ಲಾಭಾಂಶ (ಕೂಪನ್ ರೇಟ್) ಪಾವತಿಸಲಿದೆ.

ಬಾಂಡ್‌ಗಳಿಗೆ ಹೂಡಿಕೆದಾರರಿಂದ ಭಾರಿ ಸ್ಪಂದನ ವ್ಯಕ್ತವಾಗಿತ್ತು ಎಂದು ಬ್ಯಾಂಕ್‌ ಹೇಳಿದೆ. ಆರಂಭಿಕ ಮೊತ್ತವಾಗಿ ₹ 1,000 ಕೋಟಿಯ ಬಾಂಡ್‌ಗಳನ್ನು ಹೂಡಿಕೆದಾರರಿಗೆ ಮುಕ್ತವಾಗಿಸಲಾಗಿತ್ತು, ಇದನ್ನು ಇನ್ನೂ ₹ 1000 ಕೋಟಿಯಷ್ಟು ಹೆಚ್ಚಿಸುವ ಆಯ್ಕೆ ಇರಿಸಿಕೊಳ್ಳಲಾಗಿತ್ತು.

ಒಟ್ಟು ₹ 8,930 ಕೋಟಿಗಿಂತ ಹೆಚ್ಚಿನ ಮೌಲ್ಯದ ಬಾಂಡ್‌ಗಳಿಗೆ ಹೂಡಿಕೆದಾರರು ಬಿಡ್‌ ಸಲ್ಲಿಸಿದ್ದರು ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ. ಕೆನರಾ ಬ್ಯಾಂಕ್‌ ಹೊರಡಿಸುವ ಟಯರ್–2 ಬಾಂಡ್‌ಗಳಿಗೆ ರೇಟಿಂಗ್ಸ್ ಸಂಸ್ಥೆಗಳಾದ ಐಸಿಆರ್‌ಎ ಮತ್ತು ಇಂಡಿಯಾ ರೇಟಿಂಗ್ಸ್ ಎಎಎ ರ್‍ಯಾಂಕ್ ನೀಡಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.