ADVERTISEMENT

ಕೆನರಾ ಬ್ಯಾಂಕ್‌ ಸಾಲದ ಬಡ್ಡಿದರ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 16:43 IST
Last Updated 6 ಜುಲೈ 2021, 16:43 IST

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ಎಂಸಿಎಲ್‌ಆರ್‌ ಆಧರಿಸಿದ ಎಲ್ಲ ಅವಧಿಗಳ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಒಂದು ತಿಂಗಳ ಎಂಸಿಎಲ್‌ಆರ್‌ ಶೇಕಡ 6.70ರಷ್ಟು, ಮೂರು ತಿಂಗಳ ಎಂಸಿಎಲ್‌ಆರ್‌ ಶೇ 6.95ರಷ್ಟು, ಆರು ತಿಂಗಳ ಎಂಸಿಎಲ್‌ಆರ್ ಶೇ 7.30ರಷ್ಟು ಹಾಗೂ ಒಂದು ವರ್ಷದ ಎಂಸಿಎಲ್‌ಆರ್ ಶೇ 7.35ರಷ್ಟೇ ಮುಂದುವರಿಯಲಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ. ಬುಧವಾರದಿಂದ ಮುಂದಿನ ಪರಿಷ್ಕರಣೆಯವರೆಗೆ ಇದೇ ದರ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT