ADVERTISEMENT

ಕಾಸಾಗ್ರ್ಯಾಂಡ್‌ನ ಉದ್ಯೋಗಿಗಳಿಗೆ ವಿದೇಶ ಪ್ರವಾಸ ಭಾಗ್ಯ

ಪಿಟಿಐ
Published 20 ನವೆಂಬರ್ 2024, 14:11 IST
Last Updated 20 ನವೆಂಬರ್ 2024, 14:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ರಿಯಲ್‌ ಎಸ್ಟೇಟ್‌ ಕಂಪನಿ ಕಾಸಾಗ್ರ್ಯಾಂಡ್‌ ಉತ್ತಮ ಸೇವೆ ಸಲ್ಲಿಸಿದ ಒಂದು ಸಾವಿರ ಉದ್ಯೋಗಿಗಳನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದೆ.

ಸ್ಪೇನ್‌ನ ಬಾರ್ಸಿಲೋನಾಗೆ ಒಂದು ವಾರ ಪ್ರವಾಸಕ್ಕೆ ಕರೆದೊಯ್ಯಲಿದ್ದು, ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸಲಿದೆ. 

ಉದ್ಯೋಗಿಗಳಿಗೂ ಲಾಭದ ಕೊಡುಗೆ ನೀಡುವ ಭಾಗವಾಗಿ ಈ ಪ್ರವಾಸ ಆಯೋಜಿಸಿದೆ. ಉದ್ಯೋಗಿಗಳು ಕಂಪನಿಯ ಅಭಿವೃದ್ಧಿ ನೀಡಿದ ಕೊಡುಗೆ ಆಧಾರದ ಮೇಲೆ ಲಾಭದ ಹಂಚಿಕೆಯನ್ನು ನಿರ್ಧರಿಸಲಾಗುತ್ತದೆ. ಈ ಪ್ರವಾಸವು ಉದ್ಯೋಗಿಗಳಲ್ಲಿ ಬದ್ಧತೆ ಮತ್ತು ಸಮರ್ಪಣೆ ಭಾವವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಕಂಪನಿಯು ಬುಧವಾರ ತಿಳಿಸಿದೆ.

ADVERTISEMENT

2023ರಲ್ಲೂ ಕಂಪನಿಯು ಉದ್ಯೋಗಿಗಳನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದೊಯ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.