ತೆರಿಗೆ ಸಂಗ್ರಹ
ನವದೆಹಲಿ: ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿರುವಂತೆ ಹಳೆಯ ಮತ್ತು ವಿವಾದಿತ ನೇರ ತೆರಿಗೆ ಹಿಂಪಡೆಯುವ ಮಿತಿಯನ್ನು ₹1 ಲಕ್ಷಕ್ಕೆ ನಿಗದಿಗೊಳಿಸಿದೆ.
2010–11ರ ವರೆಗೆ ₹25 ಸಾವಿರಕ್ಕಿಂತ ಕಡಿಮೆ ಮೊತ್ತ ಹಾಗೂ 2011–12ರಿಂದ 2014-15ರ ವರೆಗೆ ₹10 ಸಾವಿರಕ್ಕಿಂತ ಕಡಿಮೆ ಮೊತ್ತದ ನೇರ ತೆರಿಗೆ ಬೇಡಿಕೆಯನ್ನು ಹಿಂಪಡೆಯಲಾಗುತ್ತದೆ. ಒಟ್ಟು ₹3,500 ಕೋಟಿ ತೆರಿಗೆ ಬೇಡಿಕೆಯನ್ನು ಹಿಂಪಡೆಯಲಾಗುವುದು. ಹಳೆಯ ಮತ್ತು ವಿವಾದಿತ ನೇರ ತೆರಿಗೆಗಳ ವಸೂಲಾತಿಯನ್ನು ಮುಂದುವರಿಸುವುದಿಲ್ಲ ಎಂದು ಹೇಳಿತ್ತು.
ಆದಾಯ ತೆರಿಗೆ, ಸಂಪತ್ತಿನ ತೆರಿಗೆ ಮತ್ತು ಉಡುಗೊರೆ ತೆರಿಗೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ತೆರಿಗೆ ಪಾವತಿಯೂ ₹1 ಲಕ್ಷ ಮಿತಿಗೆ ಒಳಪಟ್ಟಿರುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ.
ಸುಮಾರು 1.11 ಕೋಟಿಗೂ ಹೆಚ್ಚು ವಿವಾದಿತ ತೆರಿಗೆ ಬೇಡಿಕೆಗಳಿವೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.