ADVERTISEMENT

ಪುರಾವೆ ಇಲ್ಲದೆ ‘ಐಟಿಸಿ’ ತಡೆ ಹಿಡಿಯದಿರಿ: ಸಿಬಿಐಸಿ

ಪಿಟಿಐ
Published 6 ನವೆಂಬರ್ 2021, 14:23 IST
Last Updated 6 ನವೆಂಬರ್ 2021, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯಾವುದೇ ಪುರಾವೆ ಇಲ್ಲದೆ ಕೇವಲ ಅನುಮಾನದಿಂದ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಅನ್ನು ತಡೆಹಿಡಿಯದೇ ಇರುವಂತೆ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಜಿಎಸ್‌ಟಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಐಟಿಸಿ ತಡೆ ಹಿಡಿಯುವ ಕುರಿತು ಸಿಬಿಐಸಿ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಯಾವುದೇ ಇನ್‌ವಾಯ್ಸ್‌ ಅಥವಾ ಸೂಕ್ತ ದಾಖಲೆಪತ್ರಗಳು ಇಲ್ಲದೇ ಇರುವುದು ಸೇರಿದಂತೆ ಐದು ನಿರ್ದಿಷ್ಟ ಸಂದರ್ಭಗಳಲ್ಲಿ ಹಿರಿಯ ತೆರಿಗೆ ಅಧಿಕಾರಿಗಳು ಐಟಿಸಿಯನ್ನು ತಡೆಹಿಡಿಯಬಹುದಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

‘ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಈ ಮಾರ್ಗಸೂಚಿಗಳನ್ನು ಕಾರ್ಯರೂಪಕ್ಕೆ ತಂದರೆ ಪ್ರಾಮಾಣಿಕ ತೆರಿಗೆದಾರರು ತೆರಿಗೆ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುವುದು ತಪ್ಪಲಿದ್ದು, ದಾವೆ ಹೂಡುವುದು ಕಡಿಮೆ ಆಗಲಿದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.