ADVERTISEMENT

ವಾಕಿ–ಟಾಕಿ ಅನಧಿಕೃತ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್‌, ಮೀಶೊಗೆ ₹10 ಲಕ್ಷ ದಂಡ

ಪಿಟಿಐ
Published 16 ಜನವರಿ 2026, 13:59 IST
Last Updated 16 ಜನವರಿ 2026, 13:59 IST
   

ನವದೆಹಲಿ: ಅನಧಿಕೃತವಾಗಿ ವಾಕಿ–ಟಾಕಿಗಳನ್ನು ಮಾರಾಟ ಮಾಡಿದ್ದಕ್ಕೆ ಇ–ಕಾಮರ್ಸ್‌ ವೇದಿಕೆಗಳಾದ ಮೆಟಾ, ಅಮೆಜಾನ್, ಫ್ಲಿಪ್‌ಕಾರ್ಟ್‌ ಮತ್ತು ಮೀಶೊಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ತಲಾ ₹10 ಲಕ್ಷ ದಂಡ ವಿಧಿಸಿದೆ.

ಅನಧಿಕೃತವಾಗಿ ವಾಕಿ–ಟಾಕಿಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಗಳು ಗ್ರಾಹಕರ ರಕ್ಷಣಾ ಕಾಯ್ದೆ 2019 ಮತ್ತು ದೂರಸಂಪರ್ಕ ಕಾಯ್ದೆಯನ್ನು ಉಲ್ಲಂಘನೆ ಮಾಡಿವೆ ಎಂದು ಪ್ರಾಧಿಕಾರವು ತಿಳಿಸಿದೆ. ಅಲ್ಲದೆ, ಚಿಮಿಯಾ, ಜಿಯೋಮಾರ್ಟ್‌ ಸೇರಿದಂತೆ 13 ಕಂಪನಿಗಳಿಗೆ ನೋಟಿಸ್ ನೀಡಿದೆ. 

ಈ ಕಂಪನಿಗಳು ಗ್ರಾಹಕರ ಹಕ್ಕುಗಳ ಉಲ್ಲಂಘನೆ, ತಪ್ಪು ದಾರಿಗೆಳೆಯುವ ಜಾಹೀರಾತು ಮತ್ತು ನ್ಯಾಯಯುತವಾದ ವ್ಯಾಪಾರ ನಡೆಸುತ್ತಿಲ್ಲ. ಹೀಗಾಗಿ, ಮೀಶೊ, ಮೆಟಾ ವೇದಿಕೆ, ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ತಲಾ ₹10 ಲಕ್ಷ ದಂಡ ವಿಧಿಸಲಾಗಿದೆ. ಚಿಮಿಯಾ, ಜಿಯೋಮಾರ್ಟ್‌, ಟಾಕ್ ಪ್ರೊ ಮತ್ತು ಮಾಸ್ಕ್‌ಮ್ಯಾನ್‌ ಟಾಯ್ಸ್‌ಗೆ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ ಎಂದು ಗ್ರಾಹಕ ವ್ಯವಹಾರ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಮೀಶೊ, ಮೆಟಾ, ಚಿಮಿಯಾ, ಜಿಯೋಮಾರ್ಟ್‌ ಮತ್ತು ಟಾಕ್‌ ಪ್ರೊ ದಂಡ ಪಾವತಿಸಿವೆ. ಉಳಿದ ವೇದಿಕೆಗಳು ಪಾವತಿಸಬೇಕಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.