ADVERTISEMENT

ಗಿಗ್‌ ಕಾರ್ಮಿಕರಿಗೆ ಸೌಲಭ್ಯ | ಕರಡು ನಿಯಮ ಪ್ರಕಟ: ಕೇಂದ್ರ ಕಾರ್ಮಿಕ ಸಚಿವಾಲಯ

ಪಿಟಿಐ
Published 3 ಜನವರಿ 2026, 15:32 IST
Last Updated 3 ಜನವರಿ 2026, 15:32 IST
   

ನವದೆಹಲಿ: ಗಿಗ್‌ ಕಾರ್ಮಿಕರು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಬೇಕು ಎಂದಾದರೆ ಅವರು ವರ್ಷವೊಂದರಲ್ಲಿ ಕನಿಷ್ಠ 90 ದಿನ ಕೆಲಸ ಮಾಡಿರಬೇಕು ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ಕರಡು ನಿಯಮದಲ್ಲಿ ಹೇಳಿದೆ.

ಸಾಮಾಜಿಕ ಭದ್ರತಾ ಸಂಹಿತೆ – 2020ರ ಕರಡು ನಿಯಮಗಳನ್ನು ಡಿಸೆಂಬರ್‌ 31ರಂದು ಪ್ರಕಟಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.

‘ಗಿಗ್‌ ಕಾರ್ಮಿಕರು ಅಥವಾ ಪ್ಲ್ಯಾಟ್‌ಫಾರ್ಮ್‌ ಕಾರ್ಮಿಕರಿಗೆ ಸಂಬಂಧಿಸಿದ ಸಂಹಿತೆಯ ಅಡಿಯಲ್ಲಿ ರೂಪಿಸಿದ ಯಾವುದೇ ಯೋಜನೆಯ ಪ್ರಯೋಜನಕ್ಕೆ ಅರ್ಹರಾಗಲು ಕಾರ್ಮಿಕರು ಒಂದು ಕಂಪನಿಯ ಜೊತೆ ಗುರುತಿಸಿಕೊಂಡಿದ್ದರೆ ವರ್ಷದಲ್ಲಿ 90 ದಿನ ಕೆಲಸ ಮಾಡಿರಬೇಕು, ಹೆಚ್ಚಿನ ಸಂಖ್ಯೆಯ ಕಂಪನಿಗಳ ಜೊತೆ ಗುರುತಿಸಿಕೊಂಡಿದ್ದರೆ 120 ದಿನ ಕೆಲಸ ಮಾಡಿರಬೇಕು’ ಎಂದು ನಿಯಮದಲ್ಲಿ ಹೇಳಲಾಗಿದೆ.

ADVERTISEMENT

ಕಾರ್ಮಿಕನೊಬ್ಬ ಒಂದು ದಿನದಲ್ಲಿ ಮೂರು ಕಂಪನಿಗಳ ಜೊತೆ ಕೆಲಸ ಮಾಡಿದ್ದ ಎಂದಾದಲ್ಲಿ, ಆತ ಒಟ್ಟು ಮೂರು ದಿನ ಕೆಲಸ ಮಾಡಿದ್ದ ಎಂದು ಪರಿಗಣಿಸಲಾಗುತ್ತದೆ. ಕಂಪನಿಯು ತಾನು ನೇರವಾಗಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿರಲಿ ಅಥವಾ ಇನ್ನೊಂದು ಸಂಸ್ಥೆಯ ಮೂಲಕ ಅವರನ್ನು ಕೆಲಸಕ್ಕೆ ತೆಗೆದುಕೊಂಡಿರಲಿ, ಅವರು ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.