ADVERTISEMENT

ಚುನಾವಣೆಗೂ ಮೊದಲು ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕ ಇಳಿಕೆ?

ಅನ್ನಪೂರ್ಣ ಸಿಂಗ್
Published 3 ಮಾರ್ಚ್ 2021, 16:13 IST
Last Updated 3 ಮಾರ್ಚ್ 2021, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೆಂದ್ರ ಸರ್ಕಾರವು ಲೀಟರ್‌ಗೆ ₹ 5ರವರೆಗೆ ತಗ್ಗಿಸುವ ಸಾಧ್ಯತೆ ಇದೆ. ಅಲ್ಲದೆ, ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಕೂಡ ಸ್ಥಳೀಯ ತೆರಿಗೆಯನ್ನು ಇದೇ ಪ್ರಮಾಣದಲ್ಲಿ ಇಳಿಸಬೇಕು ಎಂದು ಒತ್ತಾಯಿಸುವ ಸಾಧ್ಯತೆ ಕೂಡ ಇದೆ.

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗೆ ನಡೆಯುವ ಚುನಾವಣೆಗೂ ಮೊದಲೇ ಕೇಂದ್ರವು ಸುಂಕವನ್ನು ಇಳಿಸುವ ನಿರೀಕ್ಷೆ ಇದೆ. ಈ ಚುನಾವಣೆಗಳು ಮಾರ್ಚ್‌ 27ರಿಂದ ಶುರುವಾಗಲಿವೆ.

ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಬೆಲೆಯು ಲೀಟರ್‌ಗೆ ₹ 100 ಗಡಿ ದಾಟಿದೆ. ಇಂಧನ ಬೆಲೆ ಹೆಚ್ಚಳವು ಸರಕು ಸಾಗಣೆ ವೆಚ್ಚವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ವಿವಿಧ ಉತ್ಪನ್ನಗಳ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆಯನ್ನೂ ತೆರೆದಿರಿಸಿದೆ.

ADVERTISEMENT

‘ವಿವಿಧ ಸಚಿವಾಲಯಗಳ (ಹಣಕಾಸು, ವಾಣಿಜ್ಯ, ಸಾರಿಗೆ ಮತ್ತು ಇಂಧನ) ನಡುವೆ, ರಾಜ್ಯ ಸರ್ಕಾರಗಳು ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಜೊತೆ ಬಿರುಸಿನ ಮಾತುಕತೆಗಳು ನಡೆಯುತ್ತಿವೆ. ಕೇಂದ್ರ ಹಾಗೂ ರಾಜ್ಯಗಳ ಬೊಕ್ಕಸದ ಮೇಲೆ ಹೊರೆ ಆಗದ ರೀತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ನಡೆದಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಕ್ಸೈಸ್ ಸುಂಕವನ್ನು ಲೀಟರ್‌ಗೆ ₹ 5ರವರೆಗೆ ಕಡಿತ ಮಾಡಲು ಅವಕಾಶ ಇದೆ. ಆದರೆ, ರಾಜ್ಯಗಳು ಕೂಡ ತಮ್ಮ ಪಾಲಿನ ತೆರಿಗೆಯನ್ನು ಒಂದಿಷ್ಟು ಕಡಿಮೆ ಮಾಡಬೇಕು ಎಂದು ಇನ್ನೊಬ್ಬರು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.