ADVERTISEMENT

ಸಿಬ್ಬಂದಿಗೆ ಬೈಕ್‌, ಕಾರು ಉಡುಗೊರೆ ನೀಡಿದ ತಮಿಳುನಾಡು ಮೂಲದ ಕಂಪನಿ

ಪಿಟಿಐ
Published 22 ಡಿಸೆಂಬರ್ 2024, 14:37 IST
Last Updated 22 ಡಿಸೆಂಬರ್ 2024, 14:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಕಠಿಣ ಶ್ರಮ ಮತ್ತು ಕಂಪನಿಗೆ ಸಮರ್ಪಣೆ ಮನೋಭಾವದಿಂದ ಕೆಲಸ ಮಾಡಿದ 20 ಸಿಬ್ಬಂದಿಗೆ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ತಮಿಳುನಾಡು ಮೂಲದ ಸುರ್ಮೌಂಟ್‌ ಲಾಜಿಸ್ಟಿಕ್ಸ್‌ ಸಲ್ಯೂಷನ್ಸ್‌ ಪ್ರೈ. ಲಿಮಿಟೆಡ್‌ ನೀಡಿದೆ. 

ನೌಕರರ ಶ್ರಮ ಮತ್ತು ಬದ್ಧತೆಗೆ ಅನುಗುಣವಾಗಿ ಟಾಟಾ ಕಾರುಗಳು, ಆ್ಯಕ್ಟಿವಾ ಸ್ಕೂಟರ್‌, ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ನೀಡಲಾಗಿದೆ. ಇದು ಉದ್ಯೋಗಿಗಳಿಗೆ ಉತ್ತೇಜನ ನೀಡಲಿದ್ದು, ಉನ್ನತ ಗುರಿ ಸಾಧನೆಗೆ ಸ್ಫೂರ್ತಿ ನೀಡಲಿದೆ ಎಂದು ಕಂಪನಿ ಭಾನುವಾರ ತಿಳಿಸಿದೆ.

ADVERTISEMENT

‘ನೌಕರರ ಕಲ್ಯಾಣ ಕಾರ್ಯಕ್ರಮದ ಅನುಷ್ಠಾನವು ಉದ್ಯೋಗಿಯ ತೃಪ್ತಿಯನ್ನು ಸುಧಾರಿಸುತ್ತದೆ. ಆದರೆ ಈ ಉತ್ತೇಜನವು ಉದ್ಯೋಗಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಲ್ಲದೇ, ಉತ್ಪಾದನೆ ಸಾಮರ್ಥ್ಯ ಮತ್ತು ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ’ ಎಂದು ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆಂಜಿಲ್‌ ರಾಯನ್‌ ಹೇಳಿದ್ದಾರೆ. ‌

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.